ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳ್ಳಿ ಕೆ.ಜಿಗೆ ₹2 ಸಾವಿರ ಇಳಿಕೆ

Published : 9 ಸೆಪ್ಟೆಂಬರ್ 2024, 15:25 IST
Last Updated : 9 ಸೆಪ್ಟೆಂಬರ್ 2024, 15:25 IST
ಫಾಲೋ ಮಾಡಿ
Comments

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಸೋಮವಾರ ಇಳಿಕೆಯಾಗಿದೆ.

10 ಗ್ರಾಂ ಚಿನ್ನದ ದರವು ₹700 ಕಡಿಮೆಯಾಗಿ ₹73,500ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹2 ಸಾವಿರ ಕಡಿಮೆಯಾಗಿ ₹83,800ಕ್ಕೆ ಇಳಿದಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ಹೇಳಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,522 ಡಾಲರ್‌ (ಅಂದಾಜು ₹2.11 ಲಕ್ಷ) ಮತ್ತು 28 ಡಾಲರ್‌ನಂತೆ (ಅಂದಾಜು ₹2,387) ಮಾರಾಟವಾಗಿದೆ.

ಇಳಿಕೆಗೆ ಕಾರಣವೇನು?: ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ, ಹಣದುಬ್ಬರ ವರದಿ, ಉದ್ಯೋಗ ದರದ ಬೆಳವಣಿಗೆಯಲ್ಲಿ ಇಳಿಕೆ ಸೇರಿದಂತೆ ದೇಶೀಯ ಆಭರಣ ತಯಾರಕರು ಮತ್ತು ಮಾರಾಟಗಾರರಿಂದ ಬೇಡಿಕೆ ಕಡಿಮೆಯಾಗಿದ್ದರಿಂದ ಹಳದಿ ಲೋಹದ ಬೆಲೆ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT