ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರ ಡಿಸೆಂಬರ್‌ವರೆಗೆ ₹18 ಲಕ್ಷ ಕೋಟಿ ತೆರಿಗೆ ಆದಾಯ

Last Updated 31 ಜನವರಿ 2023, 15:17 IST
ಅಕ್ಷರ ಗಾತ್ರ

ನವದೆಹಲಿ: 2022ರ ಡಿಸೆಂಬರ್‌ವರೆಗೆ ₹18.25 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದ್ದು, ಇದರಲ್ಲಿ ₹15.55 ಲಕ್ಷ ಕೋಟಿ ತೆರಿಗೆ ಆದಾಯ, 2.14 ಲಕ್ಷ ಕೋಟಿ ಬಡ್ಡಿ, ಇತರ ತೆರಿಗೆಯೇತರ ಆದಾಯ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳಿವೆ.

2022 ರ ಡಿಸೆಂಬರ್‌ವರೆಗೆ ಸಾಲ ಮರುಪಡೆಯುವಿಕೆ ನಾನ್‌ ಡೆಬಿಟ್‌ ಬಂಡವಾಳ ಸ್ವೀಕೃತಿ ₹16,435 ಕೋಟಿ ಮತ್ತು ₹38,671 ಕೋಟಿ ಇತರೆ ಬಂಡವಾಳದ ಸ್ವೀಕೃತಿಗಳನ್ನು ಒಳಗೊಂಡಿವೆ.

ಇದೇ ಅವಧಿಯಲ್ಲಿ ರಾಜ್ಯ ಸರ್ಕಾರಗಳ ₹ 6,09,437 ಕೋಟಿ ತೆರಿಗೆ ಪಾಲು ಹಂಚಿಕೆ ಮಾಡಲಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ₹1,59,127 ಕೋಟಿ ಹೆಚ್ಚಾಗಿದೆ.

ಸರ್ಕಾರದ ಒಟ್ಟು ವೆಚ್ಚ ₹28,18,076 ಕೋಟಿಯಾಗಿದ್ದು, ಇದರಲ್ಲಿ ₹23,28,132 ಕೋಟಿ ರೂ. ಆದಾಯ ಖಾತೆಯಲ್ಲಿ ಮತ್ತು ₹ 4,89,944 ಕೋಟಿ ಬಂಡವಾಳ ಖಾತೆಯಿಂದ ಖರ್ಚಾಗಿದೆ.

ಒಟ್ಟು ಆದಾಯ ವೆಚ್ಚದಲ್ಲಿ ₹6,80,853 ಕೋಟಿ ಬಡ್ಡಿ ಪಾವತಿ ಖಾತೆಗೆ ಮತ್ತು ₹ 3,50,524 ಕೋಟಿ ಪ್ರಮುಖ ಸಬ್ಸಿಡಿಗಳಿಗೆ ಹಂಚಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT