ನವದೆಹಲಿ: ‘ಭಾರತ ಸಮುದ್ರ ವಿಮೆ ನಿಧಿ’ ಹೆಸರಿನ ಸಂಚಿತ ನಿಧಿಯೊಂದನ್ನು ಆರಂಭಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ಶನಿವಾರ ಒಪ್ಪಿಗೆ ನೀಡಿದೆ. ಈ ನಿಧಿಗೆ ಸರ್ಕಾರದ ಕಡೆಯಿಂದ ₹12,980 ಕೋಟಿ ಹಣವನ್ನು ಖಾತರಿಯಾಗಿ ಒದಗಿಸಲಾಗುತ್ತದೆ.

ಸಮುದ್ರ ಮಾರ್ಗಗಳಲ್ಲಿ ಸಾಗುವವರಿಗೆ ವಿಮಾ ಸೌಲಭ್ಯವು ನಿರಂತರವಾಗಿ ಇರುವಂತೆ ನೋಡಿಕೊಳ್ಳಲು ಈ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ದೇಶಿ ವಿಮಾ ಸಂಚಿತ ನಿಧಿಯು ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳು, ಅಸ್ಥಿರತೆಗಳಿಂದ ವಿಮಾ ಸೌಲಭ್ಯ ವಿಚಾರದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತದೆ. ಭಾರತದ ಹಡಗುಗಳು ವಿದೇಶಿ ವಿಮೆಗಳ ಮೇಲೆ ಅವಲಂಬಿತವಾಗುವ ಸಂದರ್ಭಗಳನ್ನು ಕಡಿಮೆ ಮಾಡುತ್ತದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

‘ಈ ವಿಮಾ ಸಂಚಿತ ನಿಧಿಯು ಸಮುದ್ರ ಮಾರ್ಗಗಳಿಗೆ ಸಂಬಂಧಿಸಿದ ಎಲ್ಲ ಬಗೆಯ ಅಪಾಯಗಳಿಗೆ ವಿಮಾ ರಕ್ಷೆಯನ್ನು ಒದಗಿಸುತ್ತದೆ. ಇದು ಯಾವುದೇ ದೇಶದಿಂದ ಭಾರತದ ಬಂದರಿಗೆ ಬರುವ ಹಡಗುಗಳಿಗೆ ಹಾಗೂ ಭಾರತದ ಬಂದರುಗಳಿಂದ ಯಾವುದೇ ದೇಶಕ್ಕೆ ತೆರಳುವ ಹಡಗುಗಳಿಗೆ ವಿಮಾ ಸೌಲಭ್ಯ ನೀಡುತ್ತದೆ. ಅಸ್ಥಿರತೆ ಎದುರಿಸುತ್ತಿರುವ ಸಮುದ್ರ ಮಾರ್ಗಗಳಲ್ಲಿ ಸಾಗುವ ಹಡಗುಗಳಿಗೂ ವಿಮೆ ಅನ್ವಯವಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಜಾಗತಿಕ ಮಟ್ಟದಲ್ಲಿ ಸಂಘರ್ಷಗಳು ಮತ್ತು ಅಸ್ಥಿರತೆ ಹೆಚ್ಚಾಗಿರುವ ಕಾರಣದಿಂದಾಗಿ ಸಮುದ್ರ ಮಾರ್ಗದ ಮೂಲಕ ನಡೆಯುವ ವ್ಯಾಪಾರ ವಹಿವಾಟುಗಳಿಗೆ ಧಕ್ಕೆ ಆಗಿದೆ. ಸರಕುಗಳು ಮತ್ತು ಅವುಗಳನ್ನು ಸಾಗಿಸುವ ಹಡಗುಗಳಿಗೆ ಅಪಾಯ ಹೆಚ್ಚಾಗಿದೆ. ಇದರಿಂದಾಗಿ ವಿಮಾ ವೆಚ್ಚದಲ್ಲಿ ಏರಿಕೆ ಆಗಿದೆ, ವಿಮೆಯ ನಿರಂತರ ಲಭ್ಯತೆಯು ಅನಿಶ್ಚಿತವಾಗಿದೆ.

ಈ ಸಂಚಿತ ನಿಧಿಯ ಸದಸ್ಯ ಕಂಪನಿಗಳಿಂದ ವಿಮಾ ಪಾಲಿಸಿಯನ್ನು ನೀಡಲಾಗುತ್ತದೆ. ಈ ಸಂಚಿತ ನಿಧಿಗಾಗಿ ಒಂದು ಆಡಳಿತ ಮಂಡಳಿಯನ್ನು ರಚಿಸಲಾಗುತ್ತದೆ.

ವಿಮೆ ವಿಚಾರದಲ್ಲಿ ಸ್ವಾವಲಂಬನೆ ಬಲಪಡಿಸುವುದು ಮತ್ತು ಜಾಗತಿಕವಾಗಿ ಎದುರಾಗುವ ನಿರ್ಬಂಧಗಳಿಂದ ಉಂಟಾಗುವ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸರ್ಕಾರದ ಖಾತರಿಯ ವಿಮಾ ಸೌಲಭ್ಯಕ್ಕೆ ಚಾಲನೆ ನೀಡಲು ಮುಂದಡಿ ಇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.