ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿ ಆಮದುಗಳ ಮೇಲೆ ಅಗ್ರಿ ಸೆಸ್‌ನಿಂದ ವಿನಾಯಿತಿ ಘೋಷಿಸಿದ ಕೇಂದ್ರ

Published 1 ಸೆಪ್ಟೆಂಬರ್ 2023, 2:50 IST
Last Updated 1 ಸೆಪ್ಟೆಂಬರ್ 2023, 2:50 IST
ಅಕ್ಷರ ಗಾತ್ರ

ನವದೆಹಲಿ: ಎಲ್‌ಪಿಜಿ, ಲಿಕ್ವಿಫೈಡ್ ಪ್ರೊಪೇನ್ ಮತ್ತು ಲಿಕ್ವಿಫೈಡ್ ಬ್ಯುಟೇನ್ ಆಮದು ಮೇಲೆ ವಿಧಿಸಲಾಗುತ್ತಿದ್ದ ಶೇಕಡ 15ರಷ್ಟು ಕೃಷಿ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ನಿಂದ((ಎಐಡಿಸಿ) ಕೇಂದ್ರ ಸರ್ಕಾರ ವಿನಾಯಿತಿ ನೀಡಿದೆ.

ಜುಲೈನಲ್ಲಿ ಸರ್ಕಾರವು ಈ ಸರಕುಗಳ ಆಮದಿನ ಮೇಲೆ ಶೇಕಡ 15ರಷ್ಟು ಅಗ್ರಿ ಸೆಸ್ ವಿಧಿಸಿತ್ತು.

ಎಲ್‌ಪಿಜಿ, ಲಿಕ್ವಿಫೈಡ್ ಪ್ರೊಪೇನ್ ಮತ್ತು ಲಿಕ್ವಿಫೈಡ್ ಬ್ಯುಟೇನ್ ಆಮದುಗಳನ್ನು ಸೆಪ್ಟೆಂಬರ್ 1 ರಿಂದ ಅನ್ವಯವಾಗುವಂತೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ನಿಂದ (ಎಐಡಿಸಿ) ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT