ಜಿಎಸ್‌ಟಿ ರಾಜಿ ತೆರಿಗೆ: ವಾರ್ಷಿಕ ರಿಟರ್ನ ಸಲ್ಲಿಕೆ ಗಡುವು ವಿಸ್ತರಣೆ

ನವದೆಹಲಿ: ರಾಜಿ ತೆರಿಗೆ (ಕಂಪೋಸಿಷನ್) ಆಯ್ಕೆ ಮಾಡಿಕೊಂಡವರಿಗೆ ವಾರ್ಷಿಕ ಜಿಎಸ್‌ಟಿ ರಿಟರ್ನ್ ಸಲ್ಲಿಕೆಯ ಗಡುವನ್ನು ಅಕ್ಟೋಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ.
2019–20ನೇ ಸಾಲಿನ ವಾರ್ಷಿಕ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಆಗಸ್ಟ್ 31ರ ಬದಲಿಗೆ ಅಕ್ಟೋಬರ್ 31ಕ್ಕೆ ವಿಸ್ತರಿಸಲಾಗಿದೆ. ಈ ಸಂಬಂಧ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಅಧಿಸೂಚನೆ ಹೊರಡಿಸಿದೆ.
ವಾರ್ಷಿಕ ₹ 1.5 ಕೋಟಿಗಿಂತ ಕಡಿಮೆ ವಹಿವಾಟು ನಡೆಸುವವರು ಜಿಎಸ್‌ಟಿ ಕಂಪೊಸಿಷನ್ ಸ್ಕೀಮ್ ಆಯ್ಕೆ ಮಾಡಿಕೊಳ್ಳಬಹುದು. ಈ ಯೋಜನೆಯಡಿ ಸರಕುಗಳ ತಯಾರಕರು ಮತ್ತು ವರ್ತಕರು ಶೇ 1ರಷ್ಟು ಜಿಎಸ್‌ಟಿ ಪಾವತಿಸಬಹುದು. ಮದ್ಯ ಸರಬರಾಜು ಮಾಡದ ರೆಸ್ಟೊರೆಂಟ್‌ಗಳಿಗೆ ಇದು ಶೇ 5ರಷ್ಟಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.