ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲ್ಯಾಪ್‌ಟಾಪ್‌ ಆಮದಿಗೆ ಆನ್‌ಲೈನ್‌ ದೃಢೀಕರಣ ವಿಸ್ತರಣೆ

Published : 24 ಸೆಪ್ಟೆಂಬರ್ 2024, 16:14 IST
Last Updated : 24 ಸೆಪ್ಟೆಂಬರ್ 2024, 16:14 IST
ಫಾಲೋ ಮಾಡಿ
Comments

ನವದೆಹಲಿ: ಲ್ಯಾಪ್‌ಟಾಪ್‌, ಟ್ಲ್ಯಾಬೆಟ್‌ ಸೇರಿ ಐ.ಟಿ ಹಾರ್ಡ್‌ವೇರ್‌ ಸರಕುಗಳನ್ನು ಆಮದು ಮಾಡಿಕೊಳ್ಳುವ ಸಂಬಂಧ ರೂಪಿಸಿರುವ ಆನ್‌ಲೈನ್‌ ದೃಢೀಕರಣ ವ್ಯವಸ್ಥೆಯ ಅವಧಿಯನ್ನು ಡಿಸೆಂಬರ್‌ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದಕ್ಕೂ ಮೊದಲು ಈ ವ್ಯವಸ್ಥೆಯು ಸೆಪ್ಟೆಂಬರ್‌ 31ರ ವರೆಗೆ ಜಾರಿಯಲ್ಲಿತ್ತು.

ಲ್ಯಾಪ್‌ಟಾಪ್‌, ಪರ್ಸನಲ್‌ ಕಂಪ್ಯೂಟರ್‌, ಮೈಕ್ರೊ ಕಂಪ್ಯೂಟರ್‌ ಸೇರಿ ಕೆಲವು ದತ್ತಾಂಶ ಸಂಸ್ಕರಣಾ ಯಂತ್ರಗಳನ್ನು ಆಮದು ಮಾಡಿಕೊಳ್ಳಲು ಆಮದುದಾರರು ಈ ದೃಢೀಕರಣ ಪಡೆದುಕೊಳ್ಳಬೇಕಿದೆ ಎಂದು ಕಳೆದ ವರ್ಷದ ಆಗಸ್ಟ್‌ 3ರಂದು ಸರ್ಕಾರ ಆದೇಶ ಹೊರಡಿಸಿತ್ತು.

ಆಮದುದಾರರು ಆನ್‌ಲೈನ್‌ ದೃಢೀಕರಣ ಪಡೆದುಕೊಳ್ಳಲು ಮುಂದಿನ ವರ್ಷದ ಜನವರಿ 1ರಿಂದ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶಕರು (ಡಿಜಿಎಫ್‌ಟಿ) ತಿಳಿಸಿದ್ದಾರೆ.

2023-24ರಲ್ಲಿ ಆಮದುದಾರರು ₹79 ಸಾವಿರ ಕೋಟಿ ಮೌಲ್ಯದ ಸರಕುಗಳ ಆಮದಿಗೆ ಆನ್‌ಲೈನ್‌ ದೃಢೀಕರಣ ಮಾಡಿಕೊಂಡಿದ್ದು, ಈ ಪೈಕಿ ₹70 ಸಾವಿರ ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದ್ದಾರೆ. ಚೀನಾದಿಂದ ಅತಿಹೆಚ್ಚು ಆಮದಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT