ನವದೆಹಲಿ: 2026–27ರ ಹಿಂಗಾರು ಹಂಗಾಮಿನಲ್ಲಿ 3.03 ಕೋಟಿ ಟನ್ನಷ್ಟು ಗೋಧಿ ಖರೀದಿಸಲು ಕೇಂದ್ರ ಸರ್ಕಾರ ಗುರಿಯನ್ನು ನಿಗದಿಪಡಿಸಿದೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಆಹಾರ ಕಾರ್ಯದರ್ಶಿಗಳ ಸಭೆಯಲ್ಲಿ ಈ ಗುರಿ ಅಂತಿಮಗೊಳಿಸಲಾಗಿದೆ.

2025–26ರ ಹಿಂಗಾರು ಹಂಗಾಮಿನಲ್ಲಿ ಅಂದಾಜು 76 ಲಕ್ಷ ಟನ್ ಭತ್ತ ಖರೀದಿಸಲಾಗುವುದು. 7.79 ಲಕ್ಷ ಟನ್ ಧಾನ್ಯಗಳನ್ನು ರಾಜ್ಯಗಳಿಂದ ಖರೀದಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕಳೆದ ವರ್ಷದಲ್ಲಿ 11.79 ಕೋಟಿ ಟನ್ನಷ್ಟು ಗೋಧಿ ಉತ್ಪಾದನೆ ಆಗಿತ್ತು. ಈ ಬಾರಿ 3.34 ಕೋಟಿ ಹೆಕ್ಟೇರ್ನಲ್ಲಿ ಗೋಧಿ ಬಿತ್ತನೆ ಆಗಿದ್ದು, ಅನುಕೂಲಕರ ಹವಾಮಾನದಿಂದ ಅದು ಈ ಬಾರಿ 12 ಕೋಟಿ ಟನ್ಗೆ ತಲುಪುವ ಸಾಧ್ಯತೆ ಇದೆ.

ಪ್ರಸಕ್ತ ವರ್ಷದ ಏಪ್ರಿಲ್ 1ರ ವೇಳೆಗೆ ಭಾರತೀಯ ಆಹಾರ ನಿಗಮದಲ್ಲಿ (ಎಫ್ಸಿಐ) ಗೋಧಿ ದಾಸ್ತಾನು ಅಂದಾಜು 1.82 ಕೋಟಿ ಟನ್ನಷ್ಟು ಆಗಲಿದೆ. ಇದು ದೇಶದ ಅಗತ್ಯಗಳನ್ನು ಪೂರೈಸಲಿದೆ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.