ನವದೆಹಲಿ: ಅತ್ಯವಶ್ಯಕ ಅಲ್ಲದ ವಸ್ತುಗಳ ಆಮದನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ 15ಕ್ಕೆ ಹೆಚ್ಚಳ ಮಾಡಿದೆ.

ಚಿನ್ನ ಹಾಗೂ ಬೆಳ್ಳಿಯ ಮೇಲಿನ ಆಮದು ಸುಂಕವು ಶೇ 6ರಷ್ಟು ಇದ್ದಿದ್ದು, ಬುಧವಾರದಿಂದ (ಮೇ 13) ಅನ್ವಯ ಆಗುವಂತೆ ಶೇ 15ಕ್ಕೆ ಹೆಚ್ಚಳವಾಗಿದೆ. ಪ್ಲಾಟಿನಂ ಲೋಹದ ಮೇಲಿನ ಆಮದು ಸುಂಕ ಶೇ 6.4ರಷ್ಟು ಇದ್ದಿದ್ದನ್ನು ಶೇ 15.4ಕ್ಕೆ ಹೆಚ್ಚು ಮಾಡಲಾಗಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ 2025–26ನೆಯ ಹಣಕಾಸು ವರ್ಷದಲ್ಲಿ ಚಿನ್ನ ಹಾಗೂ ಬೆಳ್ಳಿಯ ಆಮದು ಬೆಲೆಯ ಲೆಕ್ಕದಲ್ಲಿ ಶೇ 26.7ರಷ್ಟು ಹೆಚ್ಚಳ ಕಂಡಿದೆ. ತೂಕದ ಲೆಕ್ಕದಲ್ಲಿ ಆಮದು ಶೇ 4.76ರಷ್ಟು ಕಡಿಮೆ ಆಗಿದೆ.

2024–25ರಲ್ಲಿ ದೇಶದ ಒಟ್ಟು ಆಮದಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಆಮದು ಶೇ 11.8ರಷ್ಟು ಪಾಲನ್ನು ಹೊಂದಿತ್ತು. ಆದರೆ ಅದು 2025–26ನೆಯ ಹಣಕಾಸು ವರ್ಷದಲ್ಲಿ ಶೇ 14ಕ್ಕೆ ಹೆಚ್ಚಳ ಕಂಡಿದೆ.

ಚಿನ್ನದ ಖರೀದಿಯನ್ನು ವರ್ಷದ ಅವಧಿಗೆ ಮುಂದೂಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ ನಂತರದಲ್ಲಿ ಸುಂಕ ಹೆಚ್ಚಳದ ತೀರ್ಮಾನ ಪ್ರಕಟವಾಗಿದೆ.

ಜಾಗತಿಕವಾಗಿ ಚೀನಾ ಹೊರತುಪಡಿಸಿದರೆ ಚಿನ್ನವನ್ನು ಅತಿಹೆಚ್ಚು ಆಮದು ಮಾಡಿಕೊಳ್ಳುವ ದೇಶ ಭಾರತ. ಇಲ್ಲಿನ ಚಿನ್ನಾಭರಣ ಉದ್ಯಮದ ಬೇಡಿಕೆಗೆ ಅನುಗುಣವಾಗಿ ಚಿನ್ನದ ಆಮದು ಆಗುತ್ತದೆ. ಚಿನ್ನದ ಆಮದು ವಿದೇಶಿ ವಿನಿಮಯದ ಹೊರಹರಿವಿಗೆ ಕಾರಣವಾಗುತ್ತದೆ.

‘ಬಾಹ್ಯ ಒತ್ತಡಗಳು ಹೆಚ್ಚಿರುವ ಸಂದರ್ಭದಲ್ಲಿ, ಅತ್ಯವಶ್ಯಕ ಅಲ್ಲದ ಉತ್ಪನ್ನಗಳ ಆಮದನ್ನು ಕಡಿಮೆ ಮಾಡುವುದರಿಂದ ಒಟ್ಟಾರೆಯಾಗಿ ಅರ್ಥ ವ್ಯವಸ್ಥೆಯಲ್ಲಿ ಸ್ಥಿರತೆ ಮೂಡಿಸುವುದಕ್ಕೆ ಸಾಧ್ಯ ಆಗುತ್ತದೆ’ ಎಂದು ಕೇಂದ್ರದ ತೀರ್ಮಾನದ ಹಿಂದಿನ ಉದ್ದೇಶದ ಬಗ್ಗೆ ಮೂಲವೊಂದು ವಿವರ ಒದಗಿಸಿದೆ.

ಬುಧವಾರ ಜಾರಿಗೆ ತಂದ ಹೆಚ್ಚಳ ಮೂಲಕ ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಮೂಲ ಸೀಮಾಸುಂಕವನ್ನು ದುಪ್ಪಟ್ಟುಗೊಳಿಸಿ ಶೇ 10ಕ್ಕೆ ತಂದಿದೆ. ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಪ್ರಮಾಣವನ್ನು ಐದು ಪಟ್ಟು ಹೆಚ್ಚಿಸಿ ಶೇ 5ಕ್ಕೆ ತರಲಾಗಿದೆ. ಈ ಕ್ರಮಗಳ ಪರಿಣಾಮವಾಗಿ ಚಿನ್ನ ಹಾಗೂ ಬೆಳ್ಳಿಯ ಆಮದು ಸುಂಕವು ಶೇ 15ಕ್ಕೆ ತಲುಪಿದೆ.

ಇದಲ್ಲದೆ ಆಮದುದಾರರು ಶೇ 3ರಷ್ಟು ಏಕೀಕೃತ ಜಿಎಸ್ಟಿ (ಐಜಿಎಸ್ಟಿ) ಪಾವತಿಸಬೇಕಾಗುತ್ತದೆ. ಇದರಿಂದಾಗಿ ಒಟ್ಟು ಸುಂಕವು ಶೇ 9.18ರಷ್ಟು ಇದ್ದಿದ್ದು ಶೇ 18.45ಕ್ಕೆ ಹೆಚ್ಚಳ ಆಗಿದೆ.

ದೇಶದ ಹೊರಗಿನ ಪರಿಸ್ಥಿತಿ ತೀರಾ ಅಸಾಮಾನ್ಯವಾಗಿರುವುದರಿಂದ ಚಿನ್ನ, ಬೆಳ್ಳಿಯ ಆಮದು ಸುಂಕ ಏರಿಕೆಯು ಮುನ್ನೆಚ್ಚರಿಕೆಯ ಕ್ರಮ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

‘ಚಿನ್ನ, ಬೆಳ್ಳಿಯ ಆಮದಿನ ಮೇಲೆ ಮಿತಿ ಹೇರುವ ಅಥವಾ ಅದಕ್ಕಿಂತ ಹೆಚ್ಚು ತೀವ್ರವಾದ ಕ್ರಮಕ್ಕೆ ಮುಂದಾಗುವ ಬದಲು, ಬೆಲೆ ಆಧಾರಿತ ನಿರುತ್ತೇಜನಾ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದು ಇನ್ನೊಂದು ಮೂಲ ಹೇಳಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ದೇಶದ ಆಮದು ವೆಚ್ಚಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚು ಮಾಡುವ ಸಾಧ್ಯತೆ ಇದೆ. ವಿದೇಶಿ ವಿನಿಮಯವನ್ನು ಆರ್ಥಿಕ ಚಟುವಟಿಕೆಗೆ ಬೆಂಬಲವಾಗಿ ನಿಲ್ಲುವ ಹಾಗೂ ಆಹಾರ ಭದ್ರತೆಗೆ ನೆರವಾಗುವ ಉತ್ಪನ್ನಗಳಾದ ಕಚ್ಚಾ ತೈಲ, ರಸಗೊಬ್ಬರಗಳು, ಕೈಗಾರಿಕೆಗಳಿಗೆ ಬೇಕಿರುವ ಕಚ್ಚಾ ವಸ್ತುಗಳು ಮತ್ತು ಬಂಡವಾಳ ಸರಕುಗಳ ಆಮದಿಗೆ ಬಳಸಲು ಕೇಂದ್ರ ಬಯಸಿದೆ ಎಂದು ಮೂಲವೊಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.