ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಸಿಐ ದಾಸ್ತಾನಿನಲ್ಲಿರುವ 20 ಲಕ್ಷ ಟನ್‌ ಗೋಧಿ ಮಾರುಕಟ್ಟೆಗೆ ಬಿಡುಗಡೆ?

Last Updated 27 ಡಿಸೆಂಬರ್ 2022, 15:46 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಆಹಾರ ನಿಗಮದ (ಎಫ್‌ಸಿಐ) ದಾಸ್ತಾನಿನಲ್ಲಿ ಇರುವ ಗೋಧಿಯಲ್ಲಿ 15 ಲಕ್ಷದಿಂದ 20 ಲಕ್ಷ ಟನ್‌ ಗೋಧಿಯನ್ನು 2023ರಲ್ಲಿ ಸಗಟು ಖರೀದಿದಾರರಿಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯ (ಒಎಂಎಸ್‌ಎಸ್‌) ಅಡಿಯಲ್ಲಿ ಇದನ್ನು ಸಗಟು ಖರೀದಿದಾರರಿಗೆ ನೀಡಲಾಗುತ್ತದೆ.

ಗೋಧಿಯ ಚಿಲ್ಲರೆ ಮಾರಾಟ ದರ ಹೆಚ್ಚಳವನ್ನು ನಿಯಂತ್ರಿಸುವ ಉದ್ದೇಶದಿಂದ ಈ ರೀತಿ ಮಾಡಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಬಳಿ ಇರುವ ಮಾಹಿತಿ ಪ್ರಕಾರ, ಗೋಧಿಯ ಸರಾಸರಿ ಚಿಲ್ಲರೆ ಮಾರಾಟ ದರವು ಮಂಗಳವಾರದ ಹೊತ್ತಿಗೆ ಕೆ.ಜಿ.ಗೆ ₹ 32.25 ಆಗಿದೆ. ಇದು ಹಿಂದಿನ ವರ್ಷದ ಇದೇ ದಿನ ₹ 28.53 ಆಗಿತ್ತು. ಗೋಧಿ ಹಿಟ್ಟಿನ ಬೆಲೆಯು ಮಂಗಳವಾರ ಕೆ.ಜಿ.ಗೆ ₹ 37.25ಕ್ಕೆ ತಲುಪಿದೆ. ಹಿಂದಿನ ವರ್ಷದ ಇದೇ ದಿನ ಇದರ ಬೆಲೆ ₹ 31.74 ಆಗಿತ್ತು.

ಒಎಂಎಸ್‌ಎಸ್‌ ಯೋಜನೆಯ ಅಡಿಯಲ್ಲಿ ಕೇಂದ್ರವು, ಎಫ್‌ಸಿಐಗೆ ಆಹಾರ ಧಾನ್ಯಗಳನ್ನು (ಅದರಲ್ಲೂ ಮುಖ್ಯವಾಗಿ ಗೋಧಿ ಮತ್ತು ಅಕ್ಕಿಯನ್ನು) ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತದೆ. ಮಾರುಕಟ್ಟೆಯಲ್ಲಿ ಧಾನ್ಯ ಲಭ್ಯತೆ ಹೆಚ್ಚುವಂತೆ ಮಾಡಿ, ಅದರ ಬೆಲೆಯನ್ನು ನಿಯಂತ್ರಿಸುವುದು ಇದರ ಉದ್ದೇಶ.

ಕಳೆದ ಎರಡು ಹಂಗಾಮುಗಳಲ್ಲಿ ಬೆಳೆದ ಗೋಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಆದರೆ ಬೆಲೆ ಕುರಿತು ಇನ್ನೂ ತೀರ್ಮಾನ ಆಗಿಲ್ಲ ಎಂದು ಗೊತ್ತಾಗಿದೆ.

ಎಫ್‌ಸಿಐ ಗೋದಾಮುಗಳಲ್ಲಿ ಇರುವ ಗೋಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಯನ್ನು ಗಿರಣಿಗಳೂ ಸರ್ಕಾರದ ಮುಂದಿರಿಸಿವೆ. ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಲಭ್ಯತೆಯ ಕೊರತೆ ಇರುವ ಕಾರಣ ಗೋಧಿ ಹಾಗೂ ಗೋಧಿ ಹಿಟ್ಟಿನ ಬೆಲೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT