ಸೋಮವಾರ, ಆಗಸ್ಟ್ 2, 2021
23 °C

‘ಅರ್ಥ ವ್ಯವಸ್ಥೆಗೆ ಶಕ್ತಿ: ಸರ್ಕಾರದ್ದು ಮುಕ್ತ ಮನಸ್ಸು’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅರ್ಥ ವ್ಯವಸ್ಥೆಗೆ ಶಕ್ತಿ ತುಂಬಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ.ವಿ. ಸುಬ್ರಮಣಿಯನ್ ಹೇಳಿದ್ದಾರೆ.

ಆರ್ಥಿಕ ಬೆಳವಣಿಗೆಗೆ ನೆರವಾಗಲು ಕೇಂದ್ರ ಸರ್ಕಾರವು ₹ 3 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಬೇಕು ಎಂದು ಕೆಲವು ಉದ್ಯಮ ಸಂಘಟನೆಗಳು ನೀಡಿರುವ ಸಲಹೆಗೆ ಪ್ರತಿಯಾಗಿ ಸುಬ್ರಮಣಿಯನ್ ಅವರು ಈ ಮಾತು ಹೇಳಿದ್ದಾರೆ. ‘ಹಿಂದಿನ ವರ್ಷ ಮಾಡಿದಂತೆಯೇ, ನಾವು ಇನ್ನಷ್ಟು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲು ಮುಕ್ತವಾಗಿದ್ದೇವೆ. ಆದರೆ, ಉತ್ತೇಜನ ಕ್ರಮಗಳ ಬಗ್ಗೆ ಮಾತನಾಡುವಾಗ ಹಿಂದಿನ ವರ್ಷದ ಹಾಗೂ ಈ ವರ್ಷದ ಸ್ಥಿತಿಗಳ ನಡುವೆ ಇರುವ ವ್ಯತ್ಯಾಸವನ್ನು ಗಮನಿಸಬೇಕಿರುವುದು ಮುಖ್ಯ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಹಿಂದಿನ ವರ್ಷದ ಬಜೆಟ್ಟನ್ನು ಸಾಂಕ್ರಾಮಿಕ ಅಪ್ಪಳಿಸುವ ಮೊದಲೇ ಮಂಡಿಸಲಾಗಿತ್ತು. ಆದರೆ ಈ ಬಾರಿಯ ಬಜೆಟ್‌ ಸಾಂಕ್ರಾಮಿಕದ ನಡುವೆಯೇ ಮಂಡನೆಯಾಗಿದ್ದು, ಸರ್ಕಾರದ ಕಡೆಯಿಂದ ವೆಚ್ಚ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು