ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ಬಾಂಡ್‌ ಇಟಿಎಫ್‌ನ ಮೂರನೇ ಕಂತು ಶೀಘ್ರ

Last Updated 13 ಡಿಸೆಂಬರ್ 2020, 11:55 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಭಾರತ್‌ ಬಾಂಡ್‌ ಇಟಿಎಫ್‌ನ ಮೂರನೇ ಕಂತನ್ನು ಶೀಘ್ರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಕೇಂದ್ರೋದ್ಯಮಗಳು (ಸಿಪಿಎಸ್‌) ₹ 12 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಯೋಜನೆ ಹೊಂದಿವೆ. ಕೆಲವೇ ತಿಂಗಳುಗಳಲ್ಲಿ ಭಾರತ್‌ ಬಾಂಡ್‌ ಇಟಿಎಫ್‌ನ ಮುಂದಿನ ಕಂತು ಬಿಡುಗಡೆ ಮಾಡುವ ಆಲೋಚನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಜುಲೈನಲ್ಲಿ ಬಿಡುಗಡೆ ಮಾಡಿದ್ದ ಎರಡನೇ ಕಂತಿನಲ್ಲಿ ₹ 11 ಸಾವಿರ ಕೋಟಿ ಸಂಗ್ರಹವಾಗಿತ್ತು. 2019ರ ಡಿಸೆಂಬರ್‌ನಲ್ಲಿ ₹ 12,400 ಕೋಟಿ ಸಂಗ್ರಹವಾಗಿತ್ತು.

ಕೇಂದ್ರೋದ್ಯಮಗಳ ಬಂಡವಾಳ ವೆಚ್ಚದ ಅಗತ್ಯವನ್ನು ಪೂರೈಸಿಕೊಳ್ಳಲು ಈ ಮಾರ್ಗವು ಅನುಕೂಲಕರ. ಮೊದಲ ಕಂತಿನಲ್ಲಿ ಬಾಂಡ್‌ಗಳ ಮುಕ್ತಾಯ ಅವಧಿ 3ರಿಂದ 10 ವರ್ಷಗಳವರೆಗೆ ಹಾಗೂ ಎರಡನೇ ಕಂತಿನಲ್ಲಿ 5ರಿಂದ 12 ವರ್ಷಗಳು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT