ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಕೃತ ಬ್ಯಾಂಕ್‌ ನೌಕರರ ಕೌಟುಂಬಿಕ ಪಿಂಚಣಿ ಹೆಚ್ಚಳ

Last Updated 25 ಆಗಸ್ಟ್ 2021, 14:31 IST
ಅಕ್ಷರ ಗಾತ್ರ

ಮುಂಬೈ: ಬ್ಯಾಂಕ್‌ ನೌಕರರು ಕರ್ತವ್ಯದಲ್ಲಿದ್ದ ಅವಧಿಯಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ನೀಡುವ ಪಿಂಚಣಿ (ಕೌಟುಂಬಿಕ ಪಿಂಚಣಿ) ಮೊತ್ತ ಕಡಿಮೆ ಎಂಬುದನ್ನು ಒಪ್ಪಿಕೊಂಡಿರುವ ಕೇಂದ್ರ ಸರ್ಕಾರವು, ಈ ಮೊತ್ತವನ್ನು ನೌಕರನ ಕೊನೆಯ ಸಂಬಳದ ಶೇಕಡ 30ರಷ್ಟಕ್ಕೆ ಹೆಚ್ಚಿಸುವ ಘೋಷಣೆಯನ್ನು ಬುಧವಾರ ಮಾಡಿದೆ.

ಇದುವರೆಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನೌಕರರು ಮೃತಪಟ್ಟರೆ, ಅವರ ಕುಟುಂಬಕ್ಕೆ ನೀಡುವ ಮಾಸಿಕ ಪಿಂಚಣಿ ಮೊತ್ತವು ₹ 9,284ಕ್ಕಿಂತ ಹೆಚ್ಚಾಗಲು ಅವಕಾಶವಿರಲಿಲ್ಲ ಎಂದು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ದೇವಶಿಶ್ ಪಾಂಡಾ ತಿಳಿಸಿದ್ದಾರೆ.

‘ಈ ಗರಿಷ್ಠ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ನೌಕರನ ಕೊನೆಯ ಸಂಬಳದ ಶೇಕಡ 30ರಷ್ಟನ್ನು ‍ಪಿಂಚಣಿಯಾಗಿ ಆತನ ಕುಟುಂಬಕ್ಕೆ ನೀಡಲಾಗುತ್ತದೆ’ ಎಂದು ಪಾಂಡಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ತೀರ್ಮಾನದಿಂದಾಗಿ ಇಂತಹ ಪಿಂಚಣಿಯ ಮೊತ್ತವು ₹ 30 ಸಾವಿರದಿಂದ ₹ 35 ಸಾವಿರದವರೆಗೆ ಹೆಚ್ಚಳ ಕಾಣಲಿದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿನ ನೌಕರರ ಖಾತೆಗೆ ಉದ್ಯೋಗದಾತದಿಂದ ಸಿಗುವ ಮೊತ್ತವನ್ನು ಶೇ 14ಕ್ಕೆ ಹೆಚ್ಚಿಸಲು ಕೂಡ ಇಲಾಖೆ ನಿರ್ಧರಿಸಿದೆ. ಇದು ಈವರೆಗೆ ಶೇ 10ರಷ್ಟು ಇತ್ತು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT