ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಅಂದಾಜು ಮೀರಲಿದೆ ದೂರಸಂಪರ್ಕ ವರಮಾನ: ರಾಜಾರಾಮನ್

Last Updated 20 ಫೆಬ್ರುವರಿ 2022, 15:58 IST
ಅಕ್ಷರ ಗಾತ್ರ

ನವದೆಹಲಿ: ದೂರಸಂಪರ್ಕ ಸೇವೆಗಳಿಂದ ಮುಂದಿನ ಹಣಕಾಸು ವರ್ಷದ‌ಲ್ಲಿ ಸರ್ಕಾರಕ್ಕೆ ಬರುವ ವರಮಾನವು ಬಜೆಟ್‌ ಅಂದಾಜಿಗಿಂತಲೂ ಹೆಚ್ಚಿಗೆ ಇರಲಿದೆ ಎಂದು ದೂರಸಂಪರ್ಕ ಕಾರ್ಯದರ್ಶಿ ಕೆ. ರಾಜಾರಾಮನ್‌ ಹೇಳಿದ್ದಾರೆ.

2022–23ರಲ್ಲಿದೂರಸಂಪರ್ಕ ಸೇವೆಗಳಿಂದ ಸರ್ಕಾರಕ್ಕೆ ₹ 52,806 ಕೋಟಿ ವರಮಾನ ಬರಲಿದೆ ಎಂದು ಕೇಂದ್ರ ಬಜೆಟ್‌ನಲ್ಲಿ ಅಂದಾಜು ಮಾಡಲಾಗಿದೆ.

ಕೆಲವರು ಮುಂಗಡ ಪಾವತಿ ಮಾಡುತ್ತಿದ್ದಾರೆ. ಅಲ್ಲದೆ, 5ಜಿ ತರಂಗಾಂತರ ಹರಾಜು ನಡೆಯುವುದರಿಂದ ವರಮಾನ ಸಂಗ್ರಹವು ಅಂದಾಜಿಗಿಂತಲೂ ಹೆಚ್ಚಿಗೆ ಆಗಲಿದೆ. ಆದರೆ ಎಷ್ಟು ಎಂದು ಈಗಲೇ ಅಂದಾಜು ಮಾಡುವುದು ಕಷ್ಟ ಎಂದು ಅವರು ತಿಳಿಸಿದ್ದಾರೆ.

5ಜಿ ತರಂಗಾಂತರ ಹರಾಜಿನಿಂದ ಎಷ್ಟು ಮೊತ್ತ ಸಂಗ್ರಹ ಆಗಲಿದೆ ಎಂದು ಈಗ ಅಂದಾಜು ಮಾಡಲು ಕಷ್ಟ. ಏಕೆಂದರೆ ಟ್ರಾಯ್‌ ನೀಡಿರುವ ಶಿಫಾರಸುಗಳು ಕೆಲವೊಂದು ಬದಲಾವಣೆಗಳಿಗೆ ಒಳಪಡಲಿವೆ ಎಂದಿದ್ದಾರೆ.

ಬಜೆಟ್‌ ಅಂದಾಜಿನ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೂರಸಂಪರ್ಕ ವರಮಾನವು ₹ 53,986 ಕೋಟಿ ಆಗಲಿದೆ. ಆದರೆ ಅದನ್ನೂ ಮೀರಿ ₹ 71,959 ಕೋಟಿಯಷ್ಟು ಸಂಗ್ರಹ ಆಗುವ ಅಂದಾಜು ಮಾಡಲಾಗಿದೆ. ಫೆಬ್ರುವರಿ 3ರವರೆಗೆ ₹ 69,559 ಕೋಟಿಯನ್ನು ದೂರಸಂಪರ್ಕ ಇಲಾಖೆಯು ಸಂಗ್ರಹಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT