ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ಐಪಿಒ: ಸರ್ಕಾರದಿಂದ ‘ಸೆಬಿ’ಗೆ ಶೀಘ್ರವೇ ಅಂತಿಮ ದಾಖಲೆ ಪತ್ರ ಸಲ್ಲಿಕೆ

Last Updated 11 ಮಾರ್ಚ್ 2022, 12:55 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒಗೆ ಸಂಬಂಧಿಸಿದ ಅಂತಿಮ ದಾಖಲೆ ಪತ್ರಗಳನ್ನು ಕೇಂದ್ರ ಸರ್ಕಾರವು ಶೀಘ್ರವೇ ‘ಸೆಬಿ’ಗೆ ಸಲ್ಲಿಸಲಿದೆ. ಇದರಲ್ಲಿ ಷೇರಿನ ಬೆಲೆ, ಪಾಲಿಸಿದಾರರು ಮತ್ತು ರಿಟೇಲ್‌ ಹೂಡಿಕೆದಾರರಿಗೆ ಇರುವ ರಿಯಾಯಿತಿ ಸೇರಿದಂತೆ ಕೆಲವು ಮಾಹಿತಿ ಇರಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಮಾರುಕಟ್ಟೆಯು ಅಸ್ಥಿರವಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಎಲ್‌ಐಸಿ ಐಪಿಒಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಕರಡು ದಾಖಲೆ ಪತ್ರಗಳಿಗೆ ಒಪ್ಪಿಗೆ ದೊರೆತಿದೆ. ಮುಂದಿನ ಹಂತದಲ್ಲಿ ಅಂತಿಮ ದಾಖಲೆ ಪತ್ರಗಳನ್ನು ಸಲ್ಲಿಸಬೇಕಿದೆ. ಇದರಲ್ಲಿ ಷೇರಿನ ಬೆಲೆ ಮತ್ತು ಎಷ್ಟು ಷೇರುಗಳು ಮಾರಾಟಕ್ಕೆ ಇರುತ್ತವೆ ಎನ್ನುವ ಮಾಹಿತಿ ಇರಲಿದೆ. ಪರಿಸ್ಥಿತಿಯನ್ನು ಗಮನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಎಲ್‌ಐಸಿಯು ಫೆಬ್ರುವರಿ 13ರಂದು ಕರಡು ದಾಖಲೆ ಪತ್ರಗಳನ್ನು ಸೆಬಿಗೆ ಸಲ್ಲಿಸಿತ್ತು. ಮಾರ್ಚ್‌ 9ರಂದು ಸೆಬಿ ಅದಕ್ಕೆ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರವು ಎಲ್‌ಐಸಿಯಲ್ಲಿ ಹೊಂದಿರುವ ಷೇರುಗಳಲ್ಲಿ ಶೇ 5ರಷ್ಟನ್ನು ಮಾರಾಟ ಮಾಡುವ ಮೂಲಕ ₹ 60 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT