ನವದೆಹಲಿ: ಸಹಕಾರ ವ್ಯವಸ್ಥೆಯ ಅಡಿಯಲ್ಲಿ ಕೆಲಸ ನಿರ್ವಹಿಸುವ ‘ಭಾರತ್ ಟ್ಯಾಕ್ಸಿ’ ಆ್ಯಪ್ಅನ್ನು ಆರಂಭಿಸುವ ಆಲೋಚನೆಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಈ ಆ್ಯಪ್ ಕಾರ್ಯರೂಪಕ್ಕೆ ಬಂದ ನಂತರದಲ್ಲಿ ವಾಣಿಜ್ಯ ಬಳಕೆಯ ವಾಹನಗಳ ಚಾಲಕರು ಖಾಸಗಿ ಕಂಪನಿಗಳ ಮೇಲೆ ಅವಲಂಬಿತರಾಗುವುದು ಇನ್ನಿಲ್ಲವಾಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ.

‘ಭಾರತ್ ಟ್ಯಾಕ್ಸಿ’ ಆ್ಯಪ್ಅನ್ನು ಸಹಕಾರ ಟ್ಯಾಕ್ಸಿ ಕೋ–ಆಪರೇಟಿವ್ ಲಿಮಿಟೆಡ್ ನಿರ್ವಹಿಸಲಿದೆ. ಇದು ಬಹುರಾಜ್ಯ ಸಹಕಾರ ಸಂಸ್ಥೆಯಾಗಿದೆ ಎಂದು ಅಮಿತ್ ಶಾ ಅವರು ಲೋಕಸಭೆಗೆ ಮಂಗಳವಾರ ತಿಳಿಸಿದ್ದಾರೆ.

ಟ್ಯಾಕ್ಸಿ ಸೇವೆಯನ್ನು ಈ ಆ್ಯಪ್ ಮೂಲಕ ಪಡೆದುಕೊಳ್ಳುವುದು ಗ್ರಾಹಕಸ್ನೇಹಿ ಆಗಿರಲಿದೆ. ಸೇವೆಗಳಿಗೆ ಬೆಲೆ ನಿಗದಿಯು ಪಾರದರ್ಶಕವಾಗಿ ಇರಲಿದೆ.

ಈ ಆ್ಯಪ್ನ ಬಳಕೆಗೆ ಕಮಿಷನ್ ನೀಡುವ ಪ್ರಮೇಯ ಇರುವುದಿಲ್ಲ. ಹೀಗಾಗಿ ಚಾಲಕರಿಗೆ ಪ್ರತಿ ಬಾರಿಯೂ ಪೂರ್ಣ ಮೊತ್ತ ಪಾವತಿ ಆಗುತ್ತದೆ. ಸಹಕಾರ ಸಂಘ ಪಡೆಯುವ ಲಾಭವನ್ನು ಚಾಲಕರಿಗೆ ನೇರವಾಗಿ ಹಂಚಿಕೆ ಮಾಡಲಾಗುತ್ತದೆ.

ಪಾರದರ್ಶಕ ಬೆಲೆ ನಿಗದಿ ವ್ಯವಸ್ಥೆಯು ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಲಾಭದಾಯಕ ಆಗಲಿದೆ ಎಂದು ಶಾ ಅವರು ಹೇಳಿದ್ದಾರೆ.

ಪ್ರಾಯೋಗಿಕ ಬಳಕೆ: ಭಾರತ್ ಟ್ಯಾಕ್ಸಿ ಆ್ಯಪ್ ತನ್ನ ಪ್ರಾಯೋಗಿಕ ಕಾರ್ಯಾಚರಣೆಯನ್ನು ಮಂಗಳವಾರ ದೆಹಲಿಯಲ್ಲಿ ಆರಂಭಿಸಿದೆ. ಈಗ ಈ ಆ್ಯಪ್ನಲ್ಲಿ 51 ಸಾವಿರಕ್ಕೂ ಹೆಚ್ಚು ಚಾಲಕರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.