‘ಜಿಪಿಎಫ್‌’ ಬಡ್ಡಿ ದರ ಯಥಾಸ್ಥಿತಿ

ಶನಿವಾರ, ಏಪ್ರಿಲ್ 20, 2019
25 °C

‘ಜಿಪಿಎಫ್‌’ ಬಡ್ಡಿ ದರ ಯಥಾಸ್ಥಿತಿ

Published:
Updated:

ನವದೆಹಲಿ: ಸಾಮಾನ್ಯ ಭವಿಷ್ಯ ನಿಧಿಯ (ಜಿಪಿಎಫ್‌) ಏಪ್ರಿಲ್‌– ಜೂನ್‌ ತ್ರೈಮಾಸಿಕದ ಬಡ್ಡಿದರದಲ್ಲಿ (ಶೇ 8) ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಈ ದರವು ಸಾರ್ವಜನಿಕ ಭವಿಷ್ಯ ನಿಧಿಯ (ಪಿಪಿಎಫ್‌)  ಬಡ್ಡಿ ದರಕ್ಕೆ ಸಮಾನವಾಗಿದೆ. ಜನವರಿ – ಮಾರ್ಚ್‌ ತ್ರೈಮಾಸಿಕದಲ್ಲಿಯೂ ಇದೇ ದರ ಇತ್ತು.

ಕೇಂದ್ರ ಸರ್ಕಾರಿ ನೌಕರರು, ರೈಲ್ವೆ ಮತ್ತು ರಕ್ಷಣಾ ವಲಯದ ಸಿಬ್ಬಂದಿಯ ‘ಜಿಪಿಎಫ್‌’ಗೆ ಈ ಬಡ್ಡಿ ದರ ಅನ್ವಯವಾಗುತ್ತದೆ. ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿಯೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !