ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಭವಿಷ್ಯ ನಿಧಿ ಬಡ್ಡಿದರ ಶೇ 0.4ರಷ್ಟು ಹೆಚ್ಚಳ

Last Updated 16 ಅಕ್ಟೋಬರ್ 2018, 17:03 IST
ಅಕ್ಷರ ಗಾತ್ರ

ನವದೆಹಲಿ: ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್‌) ಮತ್ತು ಅದಕ್ಕೆ ಸಂಬಂಧಿಸಿದ ಯೋಜನೆಗಳ ಬಡ್ಡಿದರವನ್ನು ಶೇ 0.4ರಷ್ಟು ಹೆಚ್ಚಿಸಲಾಗಿದೆ.

ಅಕ್ಟೋಬರ್‌ 1 ರಿಂದಲೇ ಅನ್ವಯಿಸುವಂತೆಶೇ 7.6ರಷ್ಟಿರುವ ಬಡ್ಡಿದರ ಶೇ 8ಕ್ಕೆ ಏರಿಕೆಯಾಗಿದೆ. ಅಕ್ಟೋಬರ್‌–ಡಿಸೆಂಬರ್‌ ಅವಧಿಯ ವರೆಗೆ ಜಾರಿಯಲ್ಲಿರಲಿದೆ. ಕೇಂದ್ರ ಸರ್ಕಾರಿ ನೌಕರರು, ರೈಲ್ವೆ ಮತ್ತು ರಕ್ಷಣಾ ಇಲಾಖೆಯ ಭವಿಷ್ಯ ನಿಧಿಗಳಿಗೆ ಈ ಬಡ್ಡಿದರ ಅನ್ವಯಿಸುತ್ತದೆ.

ಸೆಪ್ಟೆಂಬರ್‌ನಲ್ಲಿ ರಫ್ತು ಕುಸಿತ

ದೇಶದ ರಫ್ತು ವಹಿವಾಟು ಸೆಪ್ಟೆಂಬರ್‌ ತಿಂಗಳಲ್ಲಿಶೇ 2.15ರಷ್ಟು ಕುಸಿತ ಕಂಡಿದೆ.ಐದು ತಿಂಗಳ ನಂತರ ಮೊದಲ ಬಾರಿಗೆ ರಫ್ತು ಪ್ರಮಾಣ ಇಳಿಕೆಯಾಗಿದೆ. ಆಮದು ವಹಿವಾಟು ಶೇ 10.45ರಷ್ಟು ಏರಿಕೆಯಾಗಿದೆ. ಈ ಹಣಕಾಸು ವರ್ಷದ ಏಪ್ರಿಲ್‌ – ಸೆಪ್ಟೆಂಬರ್‌ ಅವಧಿಯಲ್ಲಿನ ವಹಿವಾಟುಶೇ 16ರಷ್ಟು ಹೆಚ್ಚಳಗೊಂಡಿದೆ.

ಆಮದು ಮತ್ತು ರಫ್ತು ವಹಿವಾಟಿನ ಮಧ್ಯದ ಅಂತರವಾಗಿರುವ ವ್ಯಾಪಾರ ಕೊರತೆಯು, ಸೆಪ್ಟೆಂಬರ್‌ನಲ್ಲಿ₹ 1 ಲಕ್ಷ ಕೋಟಿಗೆ ತಲುಪಿದೆ.

‘ಕರ್ನಾಟಕ ಒನ್‌’ ಪೇಟಿಎಂ ಪಾವತಿ

ಬೆಂಗಳೂರು: ನಾಗರಿಕ ಸೇವಾ ಕೇಂದ್ರಗಳಾದ ‘ಬೆಂಗಳೂರು ಒನ್‌’ ಮತ್ತು ‘ಕರ್ನಾಟಕ ಒನ್‌’ಗಳಲ್ಲಿ ಮೊಬೈಲ್‌ ವಾಲೆಟ್‌ ಪೇಟಿಎಂ ಮೂಲಕ ಹಣ ಪಾವತಿಸಬಹುದಾಗಿದೆ.

ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯವು ಪೇಟಿಎಂ ಜತೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಮಂಗಳವಾರ ಈ ಸೇವೆಗೆ ಚಾಲನೆ ನೀಡಲಾಗಿದೆ. ಕರ್ನಾಟಕ ಒನ್‌ (www.karnatakaone.gov.in) ಅಂತರ್ಜಾಲ ತಾಣದಲ್ಲಿಯೂ ಪೇಟಿಎಂ ಬಳಸಬಹುದಾಗಿದೆ. ಉತ್ತೇಜನಾ ಕೊಡುಗೆಯಾಗಿ ಆರಂಭದಲ್ಲಿ ಈ ಸೌಲಭ್ಯ ಬಳಸುವ ಗ್ರಾಹಕರಿಗೆ ಶೇ 10ರಷ್ಟು (₹ 20 ಮೀರದಂತೆ) ಹಣ ವಾಪಸ್ ನೀಡಲು (ಕ್ಯಾಷ್‌ಬ್ಯಾಕ್‌) ಒನ್‌ 97 ಕಮ್ಯುನಿಕೇಷನ್ಸ್‌ ಸಂಸ್ಥೆ ಸಮ್ಮತಿಸಿದೆ ಎಂದು ನಿರ್ದೇಶನಾಲಯವು
ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT