ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪ್ರಣಾಳಿಕೆ : ರೈತರಿಗೆ ತಲಾ ₹ 10 ಸಾವಿರ, ಯುವತಿಯರಿಗೆ ಚಿನ್ನದ ತಾಳಿ, ಮಹಿಳೆಯರಿಗೆ ಸ್ಮಾರ್ಟ್‌ಫೋನ್‌

Last Updated 4 ಮೇ 2018, 6:53 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನಗೆಲ್ಲಲು ಬಿಜೆಪಿ ‘ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಎಂಬ ಹೆಸರಿನ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. 

ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು:

*  ₹ 1 ಲಕ್ಷವರೆಗಿನ ರೈತರ ಸಾಲಮನ್ನಾ
*  ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್
*  ಮೊದಲ ಸಂಪುಟ ಸಭೆಯಲ್ಲಿ ಲೋಕಾಯುಕ್ತಕ್ಕೆ ಪೂರ್ಣಾಧಿಕಾರ ನೀಡುವ ತೀರ್ಮಾನ
*  ಪಿಎಫ್ಐ, ಕೆಎಫ್ ಡಿ ಸಂಘಟನೆಗಳ ನಿಷೇಧ
ಗೋಹತ್ಯೆ ತಡೆ ಮಸೂದೆ ಜಾರಿ
*  ಭ್ರಷ್ಟಾಚಾರದ ಪ್ರಕರಣ ಬಯಲಿಗೆ ಎಳೆಯುವವರ ರಕ್ಷಣೆಗಾಗಿ ವಿಷಲ್ ಬ್ಲೋವರ್‌ ಪಾಲಿಸಿ ರಚನೆ
*  ಪ್ರತಿ ಜಿಲ್ಲೆಯಲ್ಲಿ 3 ಹಾಗೂ ತಾಲ್ಲೂಕಿಗೆ 1 ಅನ್ನಪೂರ್ಣ ಕ್ಯಾಂಟೀನ್ 
*  20 ಲಕ್ಷ ಸಣ್ಣ ರೈತರಿಗೆ ತಲಾ ₹ 10,000 ನೀಡುವ ನೇಗಿಲಯೋಗಿ ಯೋಜನೆ
*  ರೈತರ ಪಂಪ್‌ಸೆಟ್‌ಗಳಿಗೆ ಪ್ರತಿದಿನ 10 ಗಂಟೆಗಳ ಕಾಲ ತ್ರೀ ಫೇಸ್‌ ವಿದ್ಯುತ್‌ ಪೂರೈಕೆ
*  ಪ್ರತಿವರ್ಷ ಒಂದು ಸಾವಿರ ರೈತರಿಗೆ ಇಸ್ರೇಲ್‌ ಮತ್ತು ಚೀನಾ ಭೇಟಿಗೆ ವ್ಯವಸ್ಥೆ

ಮಹಿಳೆಯರಿಗಾಗಿ
* ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಫೋನ್‌, ಸ್ಯಾನಿಟರಿ ನ್ಯಾಪ್‌ಕಿನ್‌
* ವಿವಾಹ ಮಂಗಳ ಯೋಜನೆಯಡಿ ಬಿಪಿಎಲ್‌ ಕುಟುಂಬದ ಯುವತಿಯರ ಮದುವೆಗೆ ₹ 25 ಸಾವಿರ ಮತ್ತು 3 ಗ್ರಾಂನ ಚಿನ್ನದ ತಾಳಿ
* ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೇ 1ರ ಬಡ್ಡಿದರದಲ್ಲಿ ₹ 2 ಲಕ್ಷದ ವರೆಗೆ ಸಾಲ

ಯುವಕರಿಗೇನು?:
* ಉದ್ಯೋಗ ಅವಕಾಶ ಸೃಷ್ಟಿಸಲು 60 ಬಿಪಿಓ ಸಂಕೀರ್ಣಗಳ ಸ್ಥಾಪನೆ
* ಹುಬ್ಬಳ್ಳಿ, ಬೆಂಗಳೂರು, ರಾಯಚೂರು, ಕಲಬುರ್ಗಿ, ಮೈಸೂರು, ಮಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ ಕಂಪನಿಗಳಿಗೆ ಸ್ಥಳಾವಕಾಶ
* ಶಾಲಾ–ಕಾಲೇಜುಗಳಲ್ಲಿ ಕ್ರೀಡಾ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ₹ 100 ಕೋಟಿ
* ಪ್ರತಿ ತಾಲ್ಲೂಕಿನಲ್ಲಿ ಅಥ್ಲೆಟಿಕ್‌ ಟ್ರ್ಯಾಕ್‌, ಈಜುಕೋಳ, ಒಳಾಂಗಣ ಕ್ರೀಡಾಂಗಣ
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT