ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಬಿಕ್ಕಟ್ಟು: ತುರ್ತು ಪರಿಸ್ಥಿತಿ ಎದುರಿಸಲು ರಘುರಾಮ್‌ ರಾಜನ್‌ ಸಲಹೆ

Last Updated 6 ಏಪ್ರಿಲ್ 2020, 15:50 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯಾನಂತರ ದೇಶದಲ್ಲಿ ಮೊದಲ ಬಾರಿಗೆ ಉದ್ಭವಿಸಿರುವ ಅತಿದೊಡ್ಡ ತುರ್ತು ಪರಿಸ್ಥಿತಿ ಎದುರಿಸಲುಸಮರ್ಥ ಪರಿಣತರ ನೆರವು ಪಡೆಯಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ರಘುರಾಂ ರಾಜನ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪರಿಸ್ಥಿತಿ ನಿಭಾಯಿಸಲು ಪ್ರತಿಯೊಂದು ನಿರ್ದೇಶನವು ಪ್ರಧಾನಿ ಕಚೇರಿಯಿಂದಲೇ (ಪಿಎಂಒ) ಬರುವುದು ಮತ್ತು ಕೆಲವರಷ್ಟೇ ಹಳಬರು ಹೆಚ್ಚುವರಿ ಕೆಲಸ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗದು. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಹೆಚ್ಚುವರಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಲಸ ಮಾಡಿರುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಅನುಭವದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಲೇಖನದ ಕೊನೆಯಲ್ಲಿ, ‘ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಭಾರತದಲ್ಲಿ ಸುಧಾರಣಾ ಕ್ರಮಗಳು ಜಾರಿಗೆ ಬರುತ್ತವೆ. ನಮಗೀಗ ಅಗತ್ಯವಾಗಿ ಬೇಕಾಗಿರುವ ಅತ್ಯಂತ ಮಹತ್ವದ ಆರ್ಥಿಕ ಮತ್ತು ಆರೋಗ್ಯ ರಕ್ಷಣೆಯ ಸುಧಾರಣಾ ಕ್ರಮಗಳ ಜಾರಿಗೆ ನಮ್ಮ ಸರ್ಕಾರಗಳು ಮುಂದಾಗಬೇಕು’ ಎಂದು ಸಲಹೆ ನೀಡಿದ್ದಾರೆ.

ಕೊರೊನಾ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ರಾಜನ್‌ ಅವರು ಸರ್ಕಾರದ ಮುಂದೆ ಹಲವಾರು ಸಲಹೆಗಳನ್ನು ಮುಂದಿಟ್ಟಿದ್ದಾರೆ.

* ಪಿಡುಗು ವ್ಯಾಪಕವಾಗಿ ಹರಡುವುದನ್ನು ಮಟ್ಟ ಹಾಕುವುದು ತಕ್ಷಣದ ಆದ್ಯತೆ ಆಗಿರಲಿ

* ವ್ಯಾಪಕ ಪರೀಕ್ಷೆ, ಕಠಿಣ ಸ್ವರೂಪದ ಕ್ವಾರಂಟೈನ್‌ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ

* ಸನ್ನದ್ಧತೆ ಸುಧಾರಿಸಲು ಸಿಕ್ಕಿರುವ 21 ದಿನಗಳ ಕಾಲಾವಕಾಶದ ಸದ್ಬಳಕೆಯಾಗಲಿ

* ನಿವೃತ್ತರು, ರಕ್ಷಣಾ ವಿಭಾಗದ ಸಿಬ್ಬಂದಿಯ ಸೇವೆ ಪಡೆಯಲು ಕ್ರಮ

* ಲಾಕ್‌ಡೌನ್‌ ನಂತರದ ಪರಿಸ್ಥಿತಿ ಎದುರಿಸಲುಪೂರ್ವ ಸಿದ್ಧತೆಗೆ ಆದ್ಯತೆ ಸಿಗಲಿ

* ಕಡಿಮೆ ಸೋಂಕಿತ ಪ್ರದೇಶದಲ್ಲಿ ಸೂಕ್ತ ಮುಂಜಾಗ್ರತೆಯೊಂದಿಗೆ ಕೆಲ ಚಟುವಟಿಕೆಗಳಿಗೆ ಅನುಮತಿ ನೀಡಿ

* ಆರೋಗ್ಯವಂತ ಯುವಕರ ಸೇವೆ ಪಡೆಯಬೇಕು

* ನೆರವಿನ ಅಗತ್ಯ ಇದ್ದವರಿಗೆ ಸರ್ಕಾರಿ ವೆಚ್ಚದಲ್ಲಿ ಹೆಚ್ಚಳ

* ವಲಸಿಗ ಕಾರ್ಮಿಕರು ನಗರಕ್ಕೆ ಸೋಂಕು ಹೊತ್ತುಕೊಂಡು ಬರದಂತೆ ಕೆಲ ಕಾಲ ನಿರ್ಬಂಧ

* ಮಹತ್ವವಲ್ಲದ ವೆಚ್ಚ ಮುಂದೂಡಿಕೆ

* ಸ್ವತಂತ್ರ ವಿತ್ತೀಯ ಮಂಡಳಿ ಸ್ಥಾಪನೆ

* ಮಧ್ಯಮಾವಧಿ ಸಾಲ ಗುರಿ ನಿಗದಿ

* ಕೇಂದ್ರೋದ್ಯಮಗಳಿಂದ ಪೂರಕ ಉದ್ದಿಮೆಗಳಿಗೆ ವಿಳಂಬ ಮಾಡದೆ ಬಿಲ್‌ ಪಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT