ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ತೆರಿಗೆ ಸಂಗ್ರಹ ಶೇ 24ರಷ್ಟು ಹೆಚ್ಚಳ: ಕೇಂದ್ರ ಹಣಕಾಸು ಸಚಿವಾಲಯ

ಪರಿಷ್ಕೃತ ಅಂದಾಜಿನ ಶೇ 79ರಷ್ಟಕ್ಕೆ ನಿವ್ವಳ ತೆರಿಗೆ ಸಂಗ್ರಹ
Last Updated 11 ಫೆಬ್ರುವರಿ 2023, 10:47 IST
ಅಕ್ಷರ ಗಾತ್ರ

ನವದೆಹಲಿ: ನೇರ ತೆರಿಗೆಯ ಸರಾಸರಿ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರುವರಿ 10ರವರೆಗೆ ₹15.67 ಲಕ್ಷ ಕೋಟಿಗೆ ತಲುಪಿದ್ದು, ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 24.09ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ.

ತೆರಿಗೆ ಮರುಪಾವತಿಯ ಬಳಿಕ ನೇರ ತೆರಿಗೆಯ ನಿವ್ವಳ ಸಂಗ್ರಹವು ₹12.98 ಲಕ್ಷ ಕೋಟಿ ಆಗಿದ್ದು, ಶೇ 18.40ರಷ್ಟು ಏರಿಕೆ ಕಂಡುಬಂದಿದೆ.

ನಿವ್ವಳ ತೆರಿಗೆ ಸಂಗ್ರಹವು ಪರಿಷ್ಕೃತ ಅಂದಾಜಿನ ಶೇ 74ರಷ್ಟು ಆಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೇಳಿದೆ.

ಪರಿಷ್ಕೃತ ಅಂದಾಜಿನ ಪ್ರಕಾರ, ಪ್ರಸಕ್ತ ಹಣಕಾಸು ವರ್ಷಕ್ಕೆ ನೇರ ತೆರಿಗೆ ಮೂಲಕ ₹16.50 ಲಕ್ಷ ಕೋಟಿ ವರಮಾನ ಸಂಗ್ರಹ ಆಗಲಿದೆ. ಇದು ಬಜೆಟ್‌ ಅಂದಾಜಿಗಿಂತಲೂ (₹14.20 ಲಕ್ಷ ಕೋಟಿ) ಹೆಚ್ಚಿನದ್ದಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ, ಆದಾಯ ಮತ್ತು ಕಾರ್ಪೊರೇಟ್ ತೆರಿಗೆಗಳನ್ನು ಒಳಗೊಂಡ ನೇರ ತೆರಿಗೆ ಸಂಗ್ರಹವು ಹಿಂದಿನ ಹಣಕಾಸು ವರ್ಷಕ್ಕಿಂತಲೂ ಶೇ 17ರಷ್ಟು ಹೆಚ್ಚಿಗೆ ಇರುವ ಅಂದಾಜು ಮಾಡಲಾಗಿದೆ. 2021–22ನೇ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಮೂಲಕ ₹14.08 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು.

ಏಪ್ರಿಲ್‌ 1ರಿಂದ ಫೆಬ್ರುವರಿ 10ರವರೆಗಿನ ಅವಧಿಯಲ್ಲಿ ಕಾರ್ಪೊರೇಟ್‌ ಆದಾಯ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆಯ ಸರಾಸರಿ ಸಂಗ್ರಹದ ಬೆಳವಣಿಗೆ ಪ್ರಮಾಣವು ಕ್ರಮವಾಗಿ ಶೇ 19.33 ಮತ್ತು ಶೇ 29.63ರಷ್ಟು ಆಗಿದೆ. ಈ ಅವಧಿಯಲ್ಲಿ ₹2.69 ಲಕ್ಷ ಕೋಟಿ ತೆರಿಗೆ ಮರುಪಾವತಿ ಮಾಡಲಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಮಾಡಿದ್ದ ಮರುಪಾವತಿ ಮೊತ್ತಕ್ಕೆ ಹೋಲಿಸಿದರೆ ಶೇ 61.58ರಷ್ಟು ಹೆಚ್ಚಿಗೆ ಇದೆ ಎಂದು ಸಿಬಿಡಿಟಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT