ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕ್ಷಮತೆಗೆ ಗ್ರುಂಡ್‌ಫೋಸ್‌ ಪಂಪ್‌

Last Updated 30 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಡೆನ್ಮಾರ್ಕ್‌ನ ಗ್ರುಂಡ್‌ಫೊಸ್‌ನ ಸಂಪೂರ್ಣ ಸ್ವಾಧೀನಕ್ಕೆ ಒಳಪಟ್ಟಿರುವ ಗ್ರುಂಡ್‌ಫೋಸ್‌ ಪಂಪ್ಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್‌, ನೀರು ಪೂರೈಕೆ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಬಳಕೆಯಾಗುವ ಅತ್ಯಾಧುನಿಕ ಪಂಪ್‌ಗನ್ನು ತಯಾರಿಸುತ್ತಿದೆ. ಜಾಗತಿಕ ಮಾರುಕಟ್ಟೆಗೆ ಪ್ರತಿ ವರ್ಷ 1.60 ಕೋಟಿ ಪಂಪ್‌ಗಳನ್ನು ತಯಾರಿಸುವ ಸಂಸ್ಥೆಯು, 1998ರಲ್ಲಿ ಭಾರತದಲ್ಲಿ ತನ್ನ ವಹಿವಾಟು ಆರಂಭಿಸಿದೆ. ಸಂಸ್ಥೆಯ ವಹಿವಾಟು ವರ್ಷದಿಂದ ವರ್ಷಕ್ಕೆ ಗಮನಾರ್ಹವಾಗಿ ವಿಸ್ತರಣೆಯಾಗುತ್ತಿದೆ.

ಸಂಸ್ಥೆಯು ನಗರಗಳ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಬಳಕೆಗೆ ಬೇಕಾದ ಗುಣಮಟ್ಟದ ಪಂಪ್‌ಗಳನ್ನು ಒದಗಿಸುತ್ತದೆ. ಜತೆಗೆ, ನೀರು ಶುದ್ಧೀಕರಣ ಘಟಕ, ನೀರು ಪೂರೈಕೆ, ಕೈಗಾರಿಕೆಗಳ ತ್ಯಾಜ್ಯ ನೀರು ನಿರ್ವಹಣೆ, ಇಂಧನ, ರಾಸಾಯನಿಕಗಳ ಸಂಸ್ಕರಣೆಉ ಉದ್ದೇಶಕ್ಕೂ ಇವುಗಳನ್ನು ಬಳಸಬಹುದಾಗಿದೆ. ಪೌರ ಸಂಸ್ಥೆಗಳು ಮತ್ತು ನೀರು ನಿರ್ವಹಣಾ ಘಟಕಗಳು, ನಗರವಾಸಿಗಳ ಬದಲಾಗುವ ಬೇಡಿಕೆಗೆ ತಕ್ಕಂತೆ ಸೆನ್ಸರ್‌ ಅಳವಡಿಸಿದ ಪಂಪ್‌ಗಳು ಕಾರ್ಯನಿರ್ವಹಿಸುತ್ತವೆ. ಇದರಿಂದ ನೀರು ಮತ್ತು ವಿದ್ಯುತ್ತಿನ ಸಮರ್ಪಕ ಬಳಕೆ ಸಾಧ್ಯವಾಗಲಿದೆ. ಅಗತ್ಯ ಇರದಿದ್ದಾಗಲೂ ಪೂರ್ಣ ಪ್ರಮಾಣದಲ್ಲಿ ಯಂತ್ರಗಳು ಕಾರ್ಯನಿರ್ವಹಿಸುವುದನ್ನು ಈ ಪಂಪ್‌ಗಳ ಬಳಕೆಯಿಂದ ತಪ್ಪಿಸಲು ಸಾಧ್ಯ.

‘ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ನಿರ್ಮಾಣ, ನದಿಗಳನ್ನು ಸ್ವಚ್ಛಗೊಳಿಸುವ ಯೋಜನೆಗೆ ಈ ಸ್ಮಾರ್ಟ್‌ಪಂಪ್‌ಗಳು ಹೆಚ್ಚು ಉಪಯುಕ್ತವಾಗಿವೆ. ದೇಶದಲ್ಲಿ ಪಂಪ್‌ ತಯಾರಿಕೆಗಳ ಒಟ್ಟಾರೆ ವಹಿವಾಟು ₹ 10 ಸಾವಿರ ಕೋಟಿಗಳಿಂದ ₹ 12 ಸಾವಿರ ಕೋಟಿಗಳವರೆಗೆ ಇದೆ. ಸಂಸ್ಥೆಯು ತನ್ನ ವಹಿವಾಟನ್ನು ₹ 500 ಕೋಟಿಗಳಿಂದ ₹ 1 ಸಾವಿರ ಕೋಟಿಗಳಿಗೆ ಹೆಚ್ಚಿಸಲು ಉದ್ದೇಶಿಸಿದೆ. ಬೆಳವಣಿಗೆ ದರ ಶೇ 8ರಷ್ಟಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಂಗನಾಥ್‌ ಎನ್‌. ಕೆ. ಅವರು ಹೇಳುತ್ತಾರೆ.

‘ಪಂಪ್‌ಗಳ ಕಾರ್ಯದಕ್ಷತೆ ಗರಿಷ್ಠ ಮಟ್ಟದಲ್ಲಿ ಇದ್ದರೆ ಅದರಿಂದ ಉದ್ದಿಮೆಗಳಿಗೆ ಹಲವಾರು ಲಾಭಗಳು ದೊರೆಯುತ್ತವೆ.
ಸ್ಟೇನ್‌ಲೆಸ್‌ ಶೀಟ್‌ ಮೆಟಲ್ಸ್‌ನಿಂದ ಈ ಪಂಪ್‌ಗಳನ್ನು ತಯಾರಿಸಲಾಗುತ್ತಿದೆ. ಭಾರತದಲ್ಲಿ ಎರಡು ಜೋಡಣಾ ಘಟಕಗಳಿವೆ. ಐದು ವಾಟ್‌ನಿಂದ 5,000 ಕಿಮೊ ವಾಟ್‌ ಸಾಮರ್ಥ್ಯದವರೆಗೆ ಪಂಪ್‌ಗಳನ್ನು ತಯಾರಿಸುತ್ತಿದೆ. ನಿರ್ದಿಷ್ಟ ವಲಯಗಳಲ್ಲಿ ಮಾತ್ರ ಪಂಪ್‌ಗಳನ್ನು ಮಾರಾಟ ಮಾಡುತ್ತಿದೆ. ಕೃಷಿ ಕ್ಷೇತ್ರದಲ್ಲಿ ಬಳಕೆಯಾಗುವ ಪಂಪ್‌ಗಳನ್ನು ಸಂಸ್ಥೆಯು ತಯಾರಿಸುವುದಿಲ್ಲ.

‘ಇತರ ಪಂಪ್‌ಗಳಿಗೆ ಹೋಲಿಸಿದರೆ ಇವುಗಳ ಬೆಲೆ ಶೇ 30ರಿಂದ ಶೇ 35ರಷ್ಟು ಹೆಚ್ಚು ಜಾಸ್ತಿ. ಆದರೆ, ದಕ್ಷತೆ ಹೆಚ್ಚು. ವಿಶ್ವಾಸಾರ್ಹತೆ, ಕಾರ್ಯಕ್ಷಮತೆಗೆ ಈ ಪಂಪ್‌ಗಳು ಖ್ಯಾತಿ ಹೊಂದಿವೆ.

‘ಮುಂಬೈನಲ್ಲಿ ಭಾರಿ ಮಳೆ ಸುರಿದಾಗ ಪ್ರವಾಹೋಪಾದಿಯಲ್ಲಿ ಹರಿಯುವ ನೀರನ್ನು ನಾಲೆಗೆ ಹರಿಯುವಂತೆ ಮಾಡಿ ಅಲ್ಲಿಂದ ಅದನ್ನು ಸಮುದ್ರಕ್ಕೆ ಪಂಪ್‌ ಮಾಡಲಾಗುತ್ತಿದೆ. 8 ವರ್ಷಗಳಿಂದ ಗ್ರುಂಡ್‌ಫೋಸ್‌ ಇದನ್ನು ನಿರ್ವಹಣೆ ಮಾಡುತ್ತಿದೆ. ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ನೀರು ಶುದ್ಧೀಕರಣ ವ್ಯವಸ್ಥೆಯು (AQpure) ನದಿ, ಕೆರೆಗಳಿಂದ ನೀರು ಎತ್ತಿ, ಸಂಸ್ಕರಿಸಿ ಶುದ್ಧ ಕುಡಿಯುವ ನೀರನ್ನಾಗಿ ಪರಿವರ್ತಿಸಲೂ ನೆರವಾಗುತ್ತಿದೆ. ಇದನ್ನು ದೂರನಿಯಂತ್ರಣ ತಂತ್ರಜ್ಞಾನದ ನೆರವಿನಿಂದ ನಿರ್ವಹಿಸಬಹುದು. ಕೆರೆಗಳ ಪುನಶ್ಚೇತನಕ್ಕೂ ಸಂಸ್ಥೆ ನೆರವಾಗಲಿದೆ.

‘ಸಂಸ್ಥೆಯು ನಿರ್ಮಿಸಿರುವ ಮೊಬೈಲ್‌ ಪಂಪಿಂಗ್ ಸ್ಟೇಷನ್‌, ಪ್ರವಾಹ ಸಂದರ್ಭದಲ್ಲಿ ನೀರು ಹೊರಹಾಕಲು ನೆರವಾಗುತ್ತದೆ. ಇದರ ನಿರ್ವಹಣೆಗೆ ಇಬ್ಬರು ಕೆಲಸಗಾರರು ಸಾಕು. ಇದೊಂದು ಶಬ್ದರಹಿತ ಯಂತ್ರ. ಒಂದು ಗಂಟೆಗೆ 4 ಲಕ್ಷ ಲೀಟರ್ ನೀರನ್ನು ಎತ್ತಿ ಹೊರ ಹಾಕಲಿದೆ. ಇದರ ಬೆಲೆ ₹ 35 ಲಕ್ಷ ಇದೆ’ ಎಂದು ರಂಗನಾಥ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT