ಜಿಎಸ್‌ಟಿ: ತೆರಿಗೆ ವಂಚನೆ ತಡೆಗೆ ತಂತ್ರಾಂಶ

7
ಅಧಿಕಾರಿಗಳ ಪರಿಶೀಲನೆಗೆ ಅನುಕೂಲ; ಜಿಎಸ್‌ಟಿಎನ್‌ ಸಿಇಒ

ಜಿಎಸ್‌ಟಿ: ತೆರಿಗೆ ವಂಚನೆ ತಡೆಗೆ ತಂತ್ರಾಂಶ

Published:
Updated:

ನವದೆಹಲಿ (ಪಿಟಿಐ): ತೆರಿಗೆ ವಂಚನೆ ತಡೆಯಲು ಅನುಕೂಲ ಆಗುವಂತಹ ತಂತ್ರಾಂಶವನ್ನು ಜಿಎಸ್‌ಟಿಎನ್‌ ಅಭಿವೃದ್ಧಿಪಡಿಸುತ್ತಿದೆ.

‘ಏಕರೂಪದ ತೆರಿಗೆ ವ್ಯವಸ್ಥೆಗಾಗಿ ಜಿಎಸ್‌ಟಿಯನ್ನು ಅಭಿವೃದ್ಧಿಪ‍ಡಿಸಲಾಗಿದೆ. ಮುಂದಿನ ಹಂತದಲ್ಲಿ ದತ್ತಾಂಶ ವಿಶ್ಲೇಷಣೆ ನೀಡಲು ಮತ್ತು ಜಿಎಸ್‌ಟಿಎನ್‌ ಜಾಲತಾಣದ ಬಳಕೆಯನ್ನು ಸುಧಾರಿಸಲು ಗಮನ ನೀಡಲಾಗುವುದು. ಜತೆಗೆ ಲೆಕ್ಕಪತ್ರ ಅಂದಾಜು, ಲೆಕ್ಕಪತ್ರ ಪರಿಶೀಲನೆಗೆ ಸಂಬಂಧಿಸಿದಂತೆಯೂ ಪೂರಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಜಿಎಸ್‌ಟಿಎನ್‌ ಸಿಇಒ ಪ್ರಕಾಶ್‌ ಕುಮಾರ್‌ ತಿಳಿಸಿದ್ದಾರೆ.

‘ಜಿಎಸ್‌ಟಿಅರ್‌–3ಬಿ ಮತ್ತು ಜಿಎಸ್‌ಟಿಆರ್‌–1, ಜಿಎಸ್‌ಟಿಆರ್‌–3ಬಿ ಮತ್ತು ಜಿಎಸ್‌ಟಿಆರ್‌–2ಎ ರಿಟರ್ನ್‌ಗಳ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಜಿಎಸ್‌ಟಿಎನ್‌ ರಾಜ್ಯವಾರು ಮಾಹಿತಿ ಸೃಷ್ಟಿಸಲಾಗಿದೆ. ಇದನ್ನು ಆಧರಿಸಿ ಅಧಿಕಾರಿಗಳು ತೆರಿಗೆ ಪಾವತಿದಾರರು ಸಲ್ಲಿಸಿರುವ ರಿಟರ್ನ್‌ಗಳನ್ನು ಪರಿಶೀಲನೆ ನಡೆಸಬಹುದಾಗಿದೆ’ ಎಂದು ಹೇಳಿದ್ದಾರೆ.

‘ಸದ್ಯ ಜಿಎಸ್‌ಟಿಎನ್‌, ತೆರಿಗೆ ಅಧಿಕಾರಿಗಳಿಗೆ ಇಂತಹ ಮಾಹಿತಿಗಳನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸ್ವತಃ ತಾವೇ ಪರಿಶೀಲನೆ ನಡೆಸಲು ಅನುಕೂಲ ಆಗುವಂತೆ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಯಾವುದೇ ಬಾಹ್ಯ ನೆರವಿಲ್ಲದೇ ತೆರಿಗೆ ಆಯುಕ್ತರೇ ರಿಟರ್ನ್ಸ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಸೃಷ್ಟಿಸಲು ಅನುಕೂಲವಾಗಲಿದೆ. ಕೆಲವೇ ತಿಂಗಳುಗಳಲ್ಲಿ ಇದು ಬಳಕೆಗೆ ಲಭ್ಯವಾಗಲಿದೆ’‌ ಎಂದು ತಿಳಿಸಿದ್ದಾರೆ.

‘11.5 ಕೋಟಿ ರಿಟರ್ನ್ಸ್‌ ಸಲ್ಲಿಕೆಯಾಗಿದ್ದು, 376 ಕೋಟಿ ಬೆಲೆಪಟ್ಟಿಗಳ ವಿವರ ಪರಿಶೀಲನೆ ನಡೆಸಲಾಗಿದೆ’ ಎಂದು ಪ್ರಕಾಶ್‌ ಮಾಹಿತಿ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !