ಭಾನುವಾರ, ಆಗಸ್ಟ್ 18, 2019
21 °C

ಜಿಎಸ್‌ಟಿ ಲಾಭಕೋರತನ ತಡೆ ಪ್ರಾಧಿಕಾರದ ಅವಧಿ ವಿಸ್ತರಣೆ?

Published:
Updated:

ನವದೆಹಲಿ: ಜಿಎಸ್‌ಟಿ ಮಂಡಳಿಯು ಲಾಭಕೋರತನ ತಡೆ ಪ್ರಾಧಿಕಾರದ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸುವ ಸಾಧ್ಯತೆ ಇದೆ.

ಇದೇ 21ರಂದು ನಡೆಯಲಿರುವ ಮಂಡಳಿ ಸಭೆಯಲ್ಲಿ ಪ್ರಾಧಿಕಾರದ ಅವಧಿಯನ್ನು 2020ರ ನವೆಂಬರ್‌ 30ರವರೆಗೆ ವಿಸ್ತರಣೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆಯಲಿರುವ ಮೊದಲ ಸಭೆ ಇದಾಗಿದೆ.

ಎರಡು ವರ್ಷಗಳ ಅವಧಿ ವಿಸ್ತರಣೆಯನ್ನು ಪ್ರಾಧಿಕಾರ ನಿರೀಕ್ಷೆ ಮಾಡುತ್ತಿದೆ.

ಜಿಎಸ್‌ಟಿ ಜಾರಿಯಾದ ಬಳಿಕ 2017ರ ನವೆಂಬರ್‌ 30ರಂದು ಈ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದಿತ್ತು. ಎರಡು ವರ್ಷಗಳ ಅಧಿಕಾರಾವಧಿ ನಿಗದಿ ಮಾಡಲಾಗಿತ್ತು. ಮದ್ಯ ತಯಾರಿಕೆಗೆ ಬಳಸುವ ಎಕ್ಸ್ಟ್ರಾ ನ್ಯೂಟ್ರಲ್‌ ಆಲ್ಕೊಹಾಲ್‌ಗೆ (ಇಎನ್‌ಎ) ಜಿಎಸ್‌ಟಿ ವಿಧಿಸುವ ಪ್ರಸ್ತಾಪದ ಬಗ್ಗೆಯೂ ಚರ್ಚೆ ನಡೆಯಲಿದೆ.

ಈ ಬಗ್ಗೆ ರಾಜ್ಯಗಳು ಭಿನ್ನ ಅಭಿಪ್ರಾಯ ಹೊಂದಿವೆ. ಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು ಎನ್ನುವುದು ದೊಡ್ಡ ರಾಜ್ಯಗಳಾದ  ಕರ್ನಾಟಕ, ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾಣ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಒತ್ತಾಯವಾಗಿದೆ.

Post Comments (+)