ಜಿಎಸ್‌ಟಿ ವಂಚನೆ ಪರಿಶೀಲನೆಗೆ ವಾರ್ಷಿಕ ರಿಟರ್ನ್‌

7

ಜಿಎಸ್‌ಟಿ ವಂಚನೆ ಪರಿಶೀಲನೆಗೆ ವಾರ್ಷಿಕ ರಿಟರ್ನ್‌

Published:
Updated:

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ವಾರ್ಷಿಕ ರಿಟರ್ನ್ ಅರ್ಜಿ ನಮೂನೆಯಿಂದ ತೆರಿಗೆ ವಂಚನೆ ಪರಿಶೀಲನೆ ನಡೆಸಲು ಸಾಧ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾರ್ಷಿಕ ರಿಟರ್ನ್‌ನಲ್ಲಿ  ಉದ್ಯಮಿ ಅಥವಾ ವರ್ತಕನ ಹಣಕಾಸು ವಹಿವಾಟಿನ ಸಂಪೂರ್ಣ ವಿವರವು ರೆವಿನ್ಯೂ ಇಲಾಖೆಗೆ ಲಭ್ಯವಾಗಲಿದೆ. ಹೀಗಾಗಿ ತೆರಿಗೆ ತಪ್ಪಿಸುವುದನ್ನು ಸುಲಭವಾಗಿ ಪತ್ತೆಮಾಡಬಹುದು.

ಜಿಎಸ್‌ಟಿಯಲ್ಲಿ ನೋಂದಣಿ ಆಗಿರುವವರಿಗೆ ಹಣಕಾಸು ಸಚಿವಾಲಯ ವಾರ್ಷಿಕ ತೆರಿಗೆ ಲೆಕ್ಕಪತ್ರ ಸಲ್ಲಿಕೆ ಅರ್ಜಿ ನಮೂನೆಯನ್ನು ನೀಡಿದೆ. ಇದರಲ್ಲಿ 2017–18ರಲ್ಲಿ ಮಾರಾಟ ಮತ್ತು ಖರೀದಿಯ ವಿವರಗಳು ಹಾಗೂ ಇನ್‌ಪುಟ್ ಟ್ಯಾಕ್ಸ್‌ ಕ್ರೆಡಿಟ್‌ ಪ್ರಯೋಜನ ಪಡೆದಿರುವ ಮಾಹಿತಿಗಳನ್ನು ನೀಡಬೇಕಾಗುತ್ತದೆ.

‘ತಿಂಗಳಿಗೊಮ್ಮೆ ಸಲ್ಲಿಸುವ ರಿಟರ್ನ್‌ಗಳ ಸಮಗ್ರ ರೂಪವೇ ವಾರ್ಷಿಕ ರಿಟರ್ನ್ ಆಗಿರಲಿದೆ. ಇದರಲ್ಲಿ ದುಬಾರಿ ಇನ್‌ಪುಟ್‌ ಕ್ರೆಡಿಟ್‌ ಪಡೆಯಲು ಅವಕಾಶವೇ ಇರುವುದಿಲ್ಲ’ ಎಂದು ಲಕ್ಷ್ಮಿಕುಮಾರನ್‌ ಆ್ಯಂಡ್‌ ಶ್ರೀಧರನ್‌ ಕಾನೂನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ. ಲಕ್ಷ್ಮಿ ಕುಮಾರನ್‌ ಅವರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !