ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌: ಜಿಎಸ್‌ಟಿ ಸಂಗ್ರಹ ₹ 1.03 ಲಕ್ಷ ಕೋಟಿ

Last Updated 1 ಜನವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಸತತ ಎರಡನೇ ತಿಂಗಳೂ ₹ 1 ಲಕ್ಷ ಕೋಟಿ ಮೊತ್ತ ದಾಟಿದೆ.

ಸರಕು ಮತ್ತು ಸೇವೆಗಳ ಬಳಕೆ ಹಾಗೂ ತೆರಿಗೆ ಪಾವತಿ ಪ್ರಮಾಣದಲ್ಲಿನ ಹೆಚ್ಚಳದ ಕಾರಣಕ್ಕೆ ಡಿಸೆಂಬರ್‌ ತಿಂಗಳಲ್ಲಿ ₹ 1,03,184 ಕೋಟಿ ತೆರಿಗೆ ಸಂಗ್ರಹವಾಗಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿನ ತೆರಿಗೆ ಸಂಗ್ರಹಕ್ಕೆ (₹ 94,726 ಕೋಟಿ) ಹೋಲಿಸಿದರೆ ಈ ಬಾರಿ ಶೇ 16ರಷ್ಟು ಹೆಚ್ಚಳವಾಗಿದೆ. ಈ ವರ್ಷದ ನವೆಂಬರ್‌ನಲ್ಲಿ ₹ 1,03,492 ಕೋಟಿ ಸಂಗ್ರಹವಾಗಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರದ ಜಿಎಸ್‌ಟಿ (ಸಿಜಿಎಸ್‌ಟಿ) ₹ 19,962 ಕೋಟಿ, ರಾಜ್ಯಗಳ ಜಿಎಸ್‌ಟಿ (ಎಸ್‌ಜಿಎಸ್‌ಟಿ) ₹ 26,792 ಕೋಟಿ, ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ) ₹ 48,099 ಕೋಟಿ ಮತ್ತು ಸೆಸ್‌ ರೂಪದಲ್ಲಿ ₹ 8,331 ಕೋಟಿ ಸಂಗ್ರಹವಾಗಿವೆ.

ನವೆಂಬರ್‌ ತಿಂಗಳ ಜಿಎಸ್‌ಟಿಆರ್‌ 3ಬಿ ರಿಟನ್ಸ್‌ ಸಲ್ಲಿಕೆಗಳ ಸಂಖ್ಯೆಯು ಡಿಸೆಂಬರ್‌ ಅಂತ್ಯದವರೆಗೆ 81.21 ಲಕ್ಷಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT