ಜಿಎಸ್‌ಟಿ ವರಮಾನದಲ್ಲಿ ಕುಸಿತ

7
ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ₹ 8.71 ಲಕ್ಷ ಕೋಟಿ ಸಂಗ್ರಹ

ಜಿಎಸ್‌ಟಿ ವರಮಾನದಲ್ಲಿ ಕುಸಿತ

Published:
Updated:

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಡಿಸೆಂಬರ್‌ ತಿಂಗಳಲ್ಲಿ ₹ 94,726 ಕೋಟಿಗಳಷ್ಟಾಗಿದೆ.

ನವೆಂಬ ₹ 97,637 ಕೋಟಿಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿನ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಡಿಸೆಂಬರ್‌ 30ರವರೆಗೆ ಸಲ್ಲಿಸಲಾದ ಒಟ್ಟು ಮಾರಾಟ ರಿಟರ್ನ್ಸ್‌ಗಳ ಸಂಖ್ಯೆಯು (ಜಿಎಸ್‌ಟಿಆರ್‌–3ಬಿ) 72.44 ಲಕ್ಷಗಳಷ್ಟಿದೆ. ಸಂಗ್ರಹವಾದ ₹ 94,726 ಕೋಟಿ ತೆರಿಗೆ ಮೊತ್ತದಲ್ಲಿ  ಕೇಂದ್ರೀಯ ಜಿಎಸ್‌ಟಿ (ಸಿಜಿಎಸ್‌ಟಿ) ₹ 16,442 ಕೋಟಿ, ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ₹ 22,459 ಕೋಟಿ, ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ) ₹ 47,936 ಕೋಟಿ ಮತ್ತು ₹ 7,889 ಕೋಟಿ ಸೆಸ್‌ ಇದೆ.

ಆಗಸ್ಟ್‌ – ಸೆಪ್ಟೆಂಬರ್‌ ಅವಧಿಯಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾದ ಪರಿಹಾರದ ಮೊತ್ತವು ₹ 11,922 ಕೋಟಿಗಳಷ್ಟಿದೆ.

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !