ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಸಂಗ್ರಹ ಇಳಿಕೆ

Last Updated 1 ಮಾರ್ಚ್ 2019, 17:47 IST
ಅಕ್ಷರ ಗಾತ್ರ

ನವದೆಹಲಿ: ಫೆಬ್ರುವರಿ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ₹ 97,247 ಕೋಟಿಗಳಷ್ಟಾಗಿದೆ.

ಜನವರಿ ತಿಂಗಳ ₹ 1.02 ಲಕ್ಷ ಕೋಟಿ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ, ಫೆಬ್ರುವರಿಯಲ್ಲಿನ ಸಂಗ್ರಹ ಕಡಿಮೆಯಾಗಿದೆ.

ಈ ವರ್ಷದ ಜನವರಿಯಿಂದ ಫೆಬ್ರುವರಿ 28ರವರೆಗೆ 73.48 ಲಕ್ಷ ಮಾರಾಟ ರಿಟರ್ನ್‌ (ಜಿಎಸ್‌ಟಿಆರ್‌–3ಬಿ) ಸಲ್ಲಿಕೆಯಾಗಿವೆ. ಫೆಬ್ರುವರಿ ತಿಂಗಳಲ್ಲಿ ಸಂಗ್ರಹವಾಗಿರುವ ₹ 97,247 ಕೋಟಿ ತೆರಿಗೆಯಲ್ಲಿ ಕೇಂದ್ರೀಯ ಜಿಎಸ್‌ಟಿ (ಸಿಜಿಎಸ್‌ಟಿ) ₹ 17,626 ಕೋಟಿ, ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ₹ 24,192, ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ) ₹ 46,953 ಕೋಟಿ ಮತ್ತು ಸೆಸ್‌ ರೂಪದಲ್ಲಿ ₹ 8,476 ಕೋಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರವು ಈ ವರ್ಷ ₹ 13.71 ಲಕ್ಷ ಕೋಟಿಗಳಷ್ಟು ಜಿಎಸ್‌ಟಿ ಸಂಗ್ರಹವಾಗಲಿದೆ ಎಂದು ಬಜೆಟ್‌ನಲ್ಲಿ ಅಂದಾಜಿಸಿತ್ತು. ಆನಂತರ ಅದನ್ನು ₹ 11.47 ಲಕ್ಷ ಕೋಟಿಗೆ ಪರಿಷ್ಕರಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರುವರಿವರೆಗೆ ಸಂಗ್ರಹವಾದ ಒಟ್ಟು ಜಿಎಸ್‌ಟಿ ಮೊತ್ತವು ₹ 10.70 ಲಕ್ಷ ಕೋಟಿಗಳಷ್ಟಿದೆ.

2019–20ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಜಿಎಸ್‌ಟಿ ಸಂಗ್ರಹವು ₹ 13 ಲಕ್ಷ ಕೋಟಿಗಿಂತ ಹೆಚ್ಚಿಗೆ ಇರಲಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT