ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ | ₹1.87 ಲಕ್ಷ ಕೋಟಿ ಸಂಗ್ರಹ

Published 1 ಮೇ 2023, 15:47 IST
Last Updated 1 ಮೇ 2023, 15:47 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಮೂಲಕ ಏಪ್ರಿಲ್‌ ತಿಂಗಳಲ್ಲಿ ₹1.87 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತರದಲ್ಲಿ ಆಗಿರುವ ಅತಿಹೆಚ್ಚಿನ ಮಾಸಿಕ ವರಮಾನ ಸಂಗ್ರಹ ಇದಾಗಿದೆ.

ಹಿಂದಿನ ವರ್ಷದ ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದ ₹ 1.68 ಲಕ್ಷ ಕೋಟಿ ವರಮಾನವು ಇದುವರೆಗಿನ ಗರಿಷ್ಠ ಮೊತ್ತವಾಗಿತ್ತು. ದಾಖಲೆಯ ವರಮಾನ ಸಂಗ್ರಹದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ದೇಶದ ಅರ್ಥ ವ್ಯವಸ್ಥೆಯ ಪಾಲಿಗೆ ಇದು ಬಹುಮುಖ್ಯ ಸುದ್ದಿ’ ಎಂದು ಹೇಳಿದ್ದಾರೆ. ತೆರಿಗೆ ಪ್ರಮಾಣ ಕಡಿಮೆ ಇದ್ದರೂ ತೆರಿಗೆ ಸಂಗ್ರಹ ಹೆಚ್ಚಾಗುತ್ತಿರುವುದು ಜಿಎಸ್‌ಟಿ ವ್ಯವಸ್ಥೆಯ ಯಶಸ್ಸನ್ನು ತೋರಿಸುತ್ತಿದೆ ಎಂದಿದ್ದಾರೆ.

ಹಿಂದಿನ ವರ್ಷದ ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದ ವರಮಾನದ ಮೊತ್ತಕ್ಕೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌ನಲ್ಲಿನ ವರಮಾನ ಸಂಗ್ರಹವು ಶೇ 12ರಷ್ಟು ಹೆಚ್ಚಾಗಿದೆ.

ಏಪ್ರಿಲ್‌ ತಿಂಗಳ 20ನೆಯ ತಾರೀಕಿನಂದು ಅತ್ಯಂತ ಹೆಚ್ಚಿನ ವರಮಾನ ಸಂಗ್ರಹ ಆಗಿದೆ. ಆ ದಿನ ಒಟ್ಟು 9.8 ಲಕ್ಷ ವಹಿವಾಟುಗಳ ಮೂಲಕ ₹68,228 ಕೋಟಿ ತೆರಿಗೆ ಸಂಗ್ರಹ ಆಗಿದೆ.

ಹೊಸ ಆರ್ಥಿಕ ವರ್ಷವು ಬಹಳ ಉತ್ತಮವಾಗಿ ಆರಂಭವಾಗಿದೆ ಎಂಬುದನ್ನು ಜಿಎಸ್‌ಟಿ ವರಮಾನ ಸಂಗ್ರಹಕ್ಕೆ ಸಂಬಂಧಿಸಿದ ಅಂಕಿ–ಅಂಶಗಳು ಹೇಳುತ್ತಿವೆ ಎಂದು ಅಸೋಚಾಂ ಅಧ್ಯಕ್ಷ ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘ಗ್ರಾಹಕರ ಕಡೆಯಿಂದ ಬರುವ ಬೇಡಿಕೆಗಳು ಚೇತರಿಕೆ ಕಂಡಿರುವ ಕಾರಣ, ದೇಶದ ಅರ್ಥ ವ್ಯವಸ್ಥೆಯಲ್ಲಿ ಆರೋಗ್ಯಪೂರ್ಣ ಬೆಳವಣಿಗೆ ಆಗಿದೆ ಎಂಬುದನ್ನು ಜಿಎಸ್‌ಟಿ ಅಂಕಿ–ಅಂಶಗಳು ಸೂಚಿಸುತ್ತಿವೆ’ ಎಂದು ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT