ಭಾನುವಾರ, ಏಪ್ರಿಲ್ 11, 2021
25 °C

ಜಿಎಸ್‌ಟಿ ಸಂಗ್ರಹ ₹ 99,939 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜೂನ್‌ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಮೇ ತಿಂಗಳಿಗಿಂತ ಕಡಿಮೆಯಾಗಿದೆ.

ಹಿಂದಿನ ತಿಂಗಳ ₹ 1,00,289 ಕೋಟಿಗೆ ಹೋಲಿಸಿದರೆ ಜೂನ್‌ನಲ್ಲಿ ₹ 99,939 ಕೋಟಿ ತೆರಿಗೆ ಸಂಗ್ರಹವಾಗಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ₹ 95,610 ಕೋಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ 4.52ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ಕೇಂದ್ರೀಯ ಜಿಎಸ್‌ಟಿ (ಸಿಜಿಎಸ್‌ಟಿ) ₹ 18,366 ಕೋಟಿ, ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ₹ 47,777 ಕೋಟಿ ಮತ್ತು ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ) ₹ 8,457 ಕೋಟಿಗಳಷ್ಟಿದೆ. ಜೂನ್‌ ತಿಂಗಳಾಂತ್ಯಕ್ಕೆ ಸಲ್ಲಿಸಲಾದ ಜಿಎಸ್‌ಟಿಆರ್‌–3ಬಿ ರಿಟರ್ನ್ಸ್‌ಗಳ ಸಂಖ್ಯೆಯು 74.38 ಲಕ್ಷದಷ್ಟಿದೆ. ಮೇ ತಿಂಗಳಲ್ಲಿ ಇದು 72.45 ಲಕ್ಷದಷ್ಟಿತ್ತು.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಸಂಗ್ರಹದ ಬಜೆಟ್‌ ಗುರಿ ತಲುಪಲಾಗುವುದು’ ಎಂದು ಹಣಕಾಸು ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹವು ಸಾಧಾರಣ ಮಟ್ಟದಲ್ಲಿ ಇರುವುದು ಕಳವಳಕಾರಿ ಸಂಗತಿಯಾಗಿದೆ. ಲೆಕ್ಕಪತ್ರ ತಪಾಸಣೆ ಮತ್ತು ಪರಿಶೀಲನೆ ಹೆಚ್ಚಿಸುವ ಅಗತ್ಯ ಇದೆ’ ಎಂದು ಪಿಡಬ್ಲ್ಯುಸಿ ಇಂಡಿಯಾ ಪಾರ್ಟನರ್‌ ಪ್ರತೀಕ್‌ ಜೈನ್‌ ಹೇಳಿದ್ದಾರೆ.

‘ನಿರೀಕ್ಷೆಗಿಂತ ಕಡಿಮೆ ತೆರಿಗೆ ಸಂಗ್ರಹವಾಗಿರುವುದನ್ನು ಗಮನಿಸಿದರೆ, ಜಿಎಸ್‌ಟಿಎನ್‌ನಲ್ಲಿ ಲಭ್ಯ ಇರುವ ದತ್ತಾಂಶಗಳ ವಿಶ್ಲೇಷಣೆ ನಡೆಸಿ, ಸೋರಿಕೆಗೆ ತುರ್ತಾಗಿ ಕಡಿವಾಣ ಹಾಕುವ ಅಗತ್ಯ ಇದೆ’ ಎಂದು ಡೆಲಾಯ್ಟ್‌ ಇಂಡಿಯಾ ಪಾರ್ಟನರ್‌ ಎಂ. ಎಸ್‌. ಮಣಿ ಪ್ರತಿಕ್ರಿಯಿಸಿದ್ದಾರೆ.

*
ಮುಂಬರುವ ತಿಂಗಳುಗಳಲ್ಲಿ ಜಿಎಸ್‌ಟಿ ಸಂಗ್ರಹ ಹೆಚ್ಚಳಗೊಳ್ಳುವ ಬಗ್ಗೆ ನಾನು ನಿಮಗೆ ಭರವಸೆ ನೀಡುವೆ.
-ಅನುರಾಗ್‌ ಠಾಕೂರ್‌, ಹಣಕಾಸು ರಾಜ್ಯ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು