ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಯಲ್ಲಿ ₹ 1.13 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

Last Updated 1 ಮಾರ್ಚ್ 2021, 13:27 IST
ಅಕ್ಷರ ಗಾತ್ರ

ನವದೆಹಲಿ: 2021ರ ಫೆಬ್ರುವರಿಯಲ್ಲಿ ₹ 1.13 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ ಆಗಿದೆ. 2020ರ ಫೆಬ್ರುವರಿಯಲ್ಲಿ ಸಂಗ್ರಹವಾಗಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ 7ರಷ್ಟು ಏರಿಕೆ ಕಂಡುಬಂದಿದೆ.

ಜಿಎಸ್‌ಟಿ ಸಂಗ್ರಹವು ಸತತ ಐದನೇ ತಿಂಗಳಿನಲ್ಲಿಯೂ ₹ 1 ಲಕ್ಷ ಕೋಟಿಯನ್ನು ದಾಟಿದೆ. ಜಿಎಸ್‌ಟಿ ಸಂಗ್ರಹವು ಆರ್ಥಿಕ ಚೇತರಿಕೆಯ ಸೂಚನೆಯನ್ನು ನೀಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಜನವರಿಯಲ್ಲಿ ಸಂಗ್ರಹವಾಗಿದ್ದ ₹ 1.19 ಲಕ್ಷ ಕೋಟಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ಆಗಿರುವ ತೆರಿಗೆ ಸಂಗ್ರಹ ಕಡಿಮೆ ಇದೆ.

ಫೆಬ್ರುವರಿಯಲ್ಲಿ ಸಂಗ್ರಹ ಆಗಿರುವ ಒಟ್ಟಾರೆ ತೆರಿಗೆಯಲ್ಲಿ ಸಿಜಿಎಸ್‌ಟಿ ₹ 21,092 ಕೋಟಿ, ಎಸ್‌ಜಿಎಸ್‌ಟಿ ₹ 27,273 ಕೋಟಿ, ಐಜಿಎಸ್‌ಟಿ ₹ 55,253 ಕೋಟಿ ಹಾಗೂ ಸೆಸ್‌ ₹ 9,525 ಕೋಟಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT