ಶನಿವಾರ, ಜನವರಿ 18, 2020
19 °C
ಮೊದಲ ಬಾರಿಗೆ ಮತಚಲಾವಣೆ ಮೂಲಕ ತೆರಿಗೆ ನಿಗದಿ

ಲಾಟರಿ: ಶೇ 28ರಷ್ಟು ಜಿಎಸ್‌ಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಲಾಟರಿಗೆ ಏಕರೂಪದ ಶೇ 28ರಷ್ಟು ತೆರಿಗೆ ದರ ನಿಗದಿಪಡಿಸಿದೆ. ಮಾರ್ಚ್‌ 1 ರಿಂದ ಜಾರಿಗೆ ಬರಲಿದೆ.

ಏಕರೂಪದ ತೆರಿಗೆ ನಿಗದಿಪಡಿಸಲು ರಾಜ್ಯಗಳು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಬುಧವಾರ ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಇದೇ ಮೊದಲ ಬಾರಿಗೆ ಮತಕ್ಕೆ ಹಾಕುವ ಮೂಲಕ ತೀರ್ಮಾನಕ್ಕೆ ಬರಲಾಯಿತು. 

ಸದ್ಯ, ರಾಜ್ಯ ಸರ್ಕಾರಗಳು ನಿರ್ವಹಿಸುವ ಲಾಟರಿಗಳಿಗೆ ಶೇ 12ರಷ್ಟು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳು ನಡೆಸುವ ಲಾಟರಿಗಳಿಗೆ ಶೇ 28ರಷ್ಟು ಜಿಎಸ್‌ಟಿ ಇದೆ.

2017ರ ಜುಲೈನಿಂದಲೂ ಜಿಎಸ್‌ಟಿಆರ್‌–1 ಸಲ್ಲಿಸದೇ ಇರುವವರಿಗೆ ದಂಡದಿಂದ ವಿನಾಯ್ತಿ ನೀಡಲಾಗಿದೆ. ಕೈಗಾರಿಕಾ ಪಾರ್ಕ್‌ಗಳನ್ನು ನಿರ್ಮಾಣ ಮಾಡಲು ಅನುಕೂಲ ಆಗುವಂತೆ ಕೈಗಾರಿಕಾ ನಿವೇಶನಗಳನ್ನು ದೀರ್ಘಾವಧಿಗೆ ಗುತ್ತಿಗೆ ನೀಡುವುದಕ್ಕೆ ತೆರಿಗೆಯಿಂದ ವಿನಾಯ್ತಿ ಸಿಗಲಿದೆ. ಬಟ್ಟೆಯಿಂದ ತಯಾರಿಸಿರುವ ಚೀಲಗಳ ಮೇಲಿನ ತೆರಿಗೆಯನ್ನು ಶೇ 18ಕ್ಕೆ ತಗ್ಗಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು