ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂಧ್ರ ಔಷಧಕ್ಕೆ ತೆರಿಗೆ ವಿನಾಯಿತಿ

Last Updated 28 ಮೇ 2021, 16:33 IST
ಅಕ್ಷರ ಗಾತ್ರ

ನವದೆಹಲಿ: ಕಪ್ಪು ಶಿಲೀಂಧ್ರದ ಚಿಕಿತ್ಸೆಯಲ್ಲಿ ಬಳಸುವ ಆ್ಯಂಫೊಟೆರಿಸಿನ್–ಬಿ ಔಷಧಿಯ ಆಮದಿಗೆ ಏಕೀಕೃತ ಸರಕು ಮತ್ತು ಸೇವಾ ತೆರಿಗೆಯಿಂದ (ಐ–ಜಿಎಸ್‌ಟಿ) ವಿನಾಯಿತಿ ನೀಡಲು ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆ ಸಮ್ಮತಿ ಸೂಚಿಸಿದೆ. ಕೋವಿಡ್ ಲಸಿಕೆಗೆ ವಿಧಿಸಲಾಗುತ್ತಿರುವ ಜಿಎಸ್‌ಟಿ ಪ್ರಮಾಣದಲ್ಲಿ ಮಂಡಳಿಯು ಬದಲಾವಣೆ ಮಾಡಿಲ್ಲ.

ಲಸಿಕೆ ಮೇಲಿನ ತೆರಿಗೆ ಪ್ರಮಾಣ ಕುರಿತು ಸಚಿವರ ಸಮಿತಿಯೊಂದು ಚರ್ಚೆ ನಡೆಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಲಸಿಕೆಗೆ ಈಗ ಶೇಕಡ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ವಿದೇಶಗಳಿಂದ ಉಚಿತವಾಗಿ ತರಿಸಿಕೊಳ್ಳುವ, ಕೋವಿಡ್‌–19ಕ್ಕೆ ಸಂಬಂಧಿಸಿದ ವಸ್ತುಗಳಿಗೆ ಐ–ಜಿಎಸ್‌ಟಿ ವಿನಾಯಿತಿ ಮುಂದುವರಿಸಲು ಮಂಡಳಿ ಒಪ್ಪಿದೆ ಎಂದು ನಿರ್ಮಲಾ ತಿಳಿಸಿದರು.

ಜಿಎಸ್‌ಟಿ ಅನುಷ್ಠಾನದಿಂದ ರಾಜ್ಯಗಳಿಗೆ ವರಮಾನದಲ್ಲಿ ಆಗಿರುವ ನಷ್ಟವನ್ನು ಭರ್ತಿ ಮಾಡಿಕೊಡಲು ₹ 1.58 ಲಕ್ಷ ಕೋಟಿಯನ್ನು ಕೇಂದ್ರವು ಸಾಲವಾಗಿ ಪಡೆಯಬೇಕು ಎಂದೂ ಮಂಡಳಿ ತೀರ್ಮಾನ ಮಾಡಿದೆ. ಜಿಎಸ್‌ಟಿ ಅನುಷ್ಠಾನದಿಂದ ಆಗಬಹುದಾದ ನಷ್ಟವನ್ನು ರಾಜ್ಯಗಳಿಗೆ ಕೇಂದ್ರವು ಭರ್ತಿ ಮಾಡಿಕೊಡಬೇಕು ಎಂಬ ನಿಯಮವನ್ನು 2022ರ ನಂತರವೂ ಜಾರಿಯಲ್ಲಿ ಇರಿಸುವ ಬಗ್ಗೆ ಪರಿಶೀಲಿಸಲು ಮಂಡಳಿಯ ವಿಶೇಷ ಸಭೆಯೊಂದು ಶೀಘ್ರದಲ್ಲೇ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT