ಶನಿವಾರ, ಜೂನ್ 25, 2022
24 °C

‘ಜಿಎಸ್‌ಟಿಆರ್‌–3ಬಿ’ಯಲ್ಲಿ ಬದಲಾವಣೆ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಐಟಿಸಿ ವಂಚನೆ ತಡೆಯಲು ಮತ್ತು ಪ್ರಾಮಾಣಿಕರಿಗೆ ಐಟಿಸಿ ಸಿಗುವಂತೆ ಮಾಡುವ ಉದ್ದೇಶದಿಂದ ಜಿಎಸ್‌ಟಿ ಮಂಡಳಿಯು ಜಿಎಸ್‌ಟಿಆರ್‌–3ಬಿ ಅರ್ಜಿ ನಮೂನೆಯಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ತರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತೆರಿಗೆದಾರರಿಗೆ ಬರಬೇಕಿರುವ ಐಟಿಸಿಯ ಸರಾಸರಿ ಮೊತ್ತ, ನಿರ್ದಿಷ್ಟ ತಿಂಗಳಿನಲ್ಲಿ ಕ್ಲೇಮ್‌ ಮಾಡಿರುವ ಮೊತ್ತ ಮತ್ತು ತೆರಿಗೆದಾರರ ಲೆಡ್ಜರ್‌ನಲ್ಲಿ ಉಳಿದಿರುವ ನಿವ್ವಳ ಮೊತ್ತದ ಬಗ್ಗೆ ವಿವರಗಳು ಪರಿಷ್ಕೃತ ಅರ್ಜಿ ನಮೂನೆಯಲ್ಲಿ ಇರಲಿವೆ.

ಜಿಎಸ್‌ಟಿ ಮಂಡಳಿಯ ಮುಂದಿನ ತಿಂಗಳು ಸಭೆ ಸೇರುವ ಸಾಧ್ಯತೆ ಇದೆ. ತಿಂಗಳ ತೆರಿಗೆ ಪಾವತಿಯ ಅರ್ಜಿ ನಮೂನೆ ಜಿಎಸ್‌ಟಿಆರ್‌–3ಬಿಯಲ್ಲಿ ಬದಲಾವಣೆ ಮಾಡುವುದರಿಂದ ಅನರ್ಹ ಐಟಿಸಿ ಸಲ್ಲಿಸುವವರನ್ನು ಪತ್ತೆ ಮಾಡಲು ನೆರವಾಗಲಿದೆ ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್‌ ಮೋಹನ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು