10ರಂದು ಜಿಎಸ್‌ಟಿ ಮಂಡಳಿ ಸಭೆ

7
ನಿರ್ಮಾಣ ಹಂತದ ಫ್ಲ್ಯಾಟ್‌ ದರ ತಗ್ಗಿಸುವ ಚಿಂತನೆ

10ರಂದು ಜಿಎಸ್‌ಟಿ ಮಂಡಳಿ ಸಭೆ

Published:
Updated:

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಇದೇ 10ರಂದು ಸಭೆ ಸೇರಲಿದ್ದು, ನಿರ್ಮಾಣ ಹಂತದಲ್ಲಿ ಇರುವ ಫ್ಲ್ಯಾಟ್‌ ಮತ್ತು ಮನೆಗಳ ಜಿಎಸ್‌ಟಿ ದರವನ್ನು ಶೇ 5ಕ್ಕೆ ತಗ್ಗಿಸುವ ಬಗ್ಗೆ ಚರ್ಚೆ ನಡೆಸಲಿದೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ಮಂಡಳಿಯ ಈ 32ನೆ ಸಭೆ ನಡೆಯಲಿದೆ. ಸರಕುಗಳ ಸಣ್ಣ ಪೂರೈಕೆದಾರರಿಗೆ ರಾಜಿ ತೆರಿಗೆ (ಕಂಪೋಸಿಷನ್‌ ಸ್ಕೀಮ್‌), ಲಾಟರಿಗೆ ಜಿಎಸ್‌ಟಿ ಮತ್ತು ನೈಸರ್ಗಿಕ ಪ್ರಕೋಪ ಸೆಸ್‌ ವಿಧಿಸುವ ಬಗ್ಗೆ ಚರ್ಚೆ
ನಡೆಸಲಿದೆ.

ಗರಿಷ್ಠ ಮಿತಿ ಹೆಚ್ಚಳ: ಸದ್ಯಕ್ಕೆ ವಾರ್ಷಿಕ ₹ 20 ಲಕ್ಷದಷ್ಟು ವಹಿವಾಟು ನಡೆಸುವ  ವಹಿವಾಟುದಾರರಿಗೆ ಜಿಎಸ್‌ಟಿಯಿಂದ ವಿನಾಯ್ತಿ ನೀಡಲಾಗಿದೆ. ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ  (ಎಂಎಸ್‌ಎಂಇ) ಅನ್ವಯವಾಗಿರುವ ಈ ಗರಿಷ್ಠ ಮಿತಿಯನ್ನು ₹ 75 ಲಕ್ಷಕ್ಕೆ ಹೆಚ್ಚಿಸುವುದನ್ನೂ ಮಂಡಳಿಯು ಪರಿಗಣನೆಗೆ ತೆಗೆದುಕೊಳ್ಳಲಿದೆ.

ಡಿಸೆಂಬರ್‌ 22ರಂದು ನಡೆದ ಸಭೆಯಲ್ಲಿ ಮಂಡಳಿಯು ಶೇ 28ರ ತೆರಿಗೆ ದರವನ್ನು ಸರಳೀಕರಣಗೊಳಿಸಿ, 23 ಸರಕು ಮತ್ತು ಸೇವೆಗಳ ದರ ಕಡಿಮೆ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !