ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.17ರಂದು ವರ್ಚುವಲ್‌ ಸಭೆ ನಡೆಸಲಿದೆ ಜಿಎಸ್‌ಟಿ ಮಂಡಳಿ

Last Updated 26 ನವೆಂಬರ್ 2022, 12:36 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿ ಮಂಡಳಿಯ 48ನೇ ಸಭೆಯು ಡಿಸೆಂಬರ್‌ 17ರಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯಲಿದೆ ಎಂದು ಮಂಡಳಿಯು ಟ್ವೀಟ್‌ ಮಾಡಿದೆ.

ಕ್ಯಾಸಿನೊ, ಆನ್‌ಲೈನ್‌ ಆಟಗಳು ಹಾಗೂ ಕುದುರೆ ರೇಸ್‌ಗೆ ಎಷ್ಟು ಪ್ರಮಾಣದ ಜಿಎಸ್‌ಟಿ ವಿಧಿಸಬೇಕು ಎನ್ನುವ ಕುರಿತು ಹಾಗೂ ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿ ರಚನೆ ಮಾಡುವ ಕುರಿತು ರಾಜ್ಯ ಹಣಕಾಸು ಸಚಿವರ ಸಮಿತಿಯ ವರದಿಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಅಲ್ಲದೆ, ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಅಡಕವಾಗಿರುವ ಶಿಕ್ಷಾರ್ಹ ಅಪರಾಧಗಳ ಉಲ್ಲೇಖವನ್ನು ಜಿಎಸ್‌ಟಿ ಕಾಯ್ದೆಯಿಂದ ತೆಗೆಯುವ ಬಗ್ಗೆ ಅಧಿಕಾರಿಗಳು ಸಿದ್ಧಪಡಿಸಿರುವ ವರದಿಯನ್ನೂ ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT