ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಬಲಪಡಿಸಲು ಗಮನ

ರಿಟರ್ನ್ಸ್, ಮರುಪಾವತಿ ಸರಳಗೊಳಿಸುವ ಪ್ರಕ್ರಿಯೆ ಜಾರಿ
Last Updated 27 ಡಿಸೆಂಬರ್ 2018, 17:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಇನ್ನಷ್ಟು ಬಲಪಡಿಸುವತ್ತ ಹೆಚ್ಚಿನ ಗಮನ ನೀಡಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ.

ಜಿಎಸ್‌ಟಿಯಲ್ಲಿ ಶೇ 5, ಶೇ 12, ಶೇ 18 ಮತ್ತು ಶೇ 28 ಹೀಗೆ ನಾಲ್ಕು ಹಂತಗಳಿವೆ. ಇಲ್ಲಿಯವರೆಗೆ ಅಂದಾಜು 214 ಸರಕುಗಳ ತೆರಿಗೆ ತಗ್ಗಿಸಲಾಗಿದೆ.ಜಿಎಸ್‌ಟಿ ಜಾರಿಗೊಳಿಸಿದಾಗ ಶೇ 28ರ ಗರಿಷ್ಠ ತೆರಿಗೆ ವ್ಯಾಪ್ತಿಯಲ್ಲಿ 226 ಸರಕುಗಳಿದ್ದವು. ಸದ್ಯ 28 ಸರಕುಗಳು ಮಾತ್ರವೇ ಗರಿಷ್ಠ ತೆರಿಗೆಯಲ್ಲಿ ಉಳಿದಿವೆ.

‘ಮುಂದಿನ ದಿನಗಳಲ್ಲಿ ಶೇ 12 ಮತ್ತು ಶೇ 18ರ ಮಧ್ಯೆ ಒಂದು ಹೊಸ ದರ ನಿಗದಿಮಾಡಲಾಗುವುದು’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

‘ಗಬ್ಬರ್‌ ಸಿಂಗ್‌ ಟ್ಯಾಕ್ಸ್‌’ ಎನ್ನುವ ಟೀಕೆಯನ್ನು ಸರ್ಕಾರ ಅಲ್ಲಗಳೆದಿದೆ. ಜಿಎಸ್‌ಟಿ ಜಾರಿಗೊಳಿಸಿ ಒಂದೂವರೆ ವರ್ಷದಲ್ಲಿಯೇ ವ್ಯವಸ್ಥೆ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ತಪ್ಪಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸುವುದು, ರಿಟರ್ನ್ಸ್ ಸಲ್ಲಿಕೆ ಮತ್ತು ಮರುಪಾವತಿ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳಗೊಳಿಸುವತ್ತ ಗಮನ ಹರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT