ಬುಧವಾರ, ಆಗಸ್ಟ್ 5, 2020
26 °C

ಜಿಎಸ್‌ಟಿ: ವಿಳಂಬ ರಿಟರ್ನ್‌ ದಂಡಕ್ಕೆ ₹ 500 ಮಿತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

 ನವದೆಹಲಿ: ಮಾಸಿಕ ಮತ್ತು ತ್ರೈಮಾಸಿಕ ಮಾರಾಟ ರಿಟರ್ನ್‌ ಮತ್ತು ತೆರಿಗೆ ಪಾವತಿ ಅರ್ಜಿ ಜಿಎಸ್‌ಟಿಆರ್‌–3ಬಿ ವಿಳಂಬ ಸಲ್ಲಿಕೆಯ ಶುಲ್ಕವನ್ನು ಗರಿಷ್ಠ ₹ 500ಕ್ಕೆ ಮಿತಿಗೊಳಿಸಲಾಗಿದೆ.

ಪ್ರತಿ ರಿಟರ್ನ್‌ಗೆ ವಿಳಂಬ ಶುಲ್ಕದ ಮಿತಿ ನಿಗದಿಪಡಿಸಿರುವುದು ಜಿಎಸ್‌ಟಿ ತೆರಿಗೆದಾರರಿಗೆ ನೆಮ್ಮದಿ ನೀಡಲಿದೆ. ‌2017ರ ಜುಲೈನಿಂದ 2020ರ ಜುಲೈವರೆಗಿನ ಅವಧಿಯ ರಿಟರ್ನ್‌ಗಳಿಗೆ ಇದು ಅನ್ವಯವಾಗಲಿದೆ. ಇದೇ ಸೆಪ್ಟೆಂಬರ್‌ ಅಂತ್ಯದ ಒಳಗೆ ಸಲ್ಲಿಕೆಯಾಗುವ ‘ಜಿಎಸ್‌ಟಿಆರ್‌–3ಬಿ’ ರಿಟರ್ನ್‌ಗಳಿಗೆ ಇದು ಅನ್ವಯವಾಗಲಿದೆ.  ತೆರಿಗೆ ಬಾಕಿ ಉಳಿಸಿಕೊಂಡಿರದಿದ್ದರೆ ವಿಳಂಬ ಶುಲ್ಕ ಇರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು