ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ಸೇವಾ ತೆರಿಗೆ–2 ಅಕ್ಟೋಬರ್‌ನಲ್ಲಿ ಆರಂಭ

ಜಿಎಸ್‌ಟಿ: ಇನ್ನಷ್ಟು ಸರಳ ರಿಟರ್ನ್‌
Last Updated 29 ಜೂನ್ 2019, 18:59 IST
ಅಕ್ಷರ ಗಾತ್ರ

ಬೆಂಗಳೂರು: ತಿಂಗಳಿಗೆ ಒಂದು ರಿಟರ್ನ್‌ ಸಲ್ಲಿಸುವ ಎರಡನೇ ಹಂತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದ್ದು, ತೆರಿಗೆ ವಂಚನೆ ತಡೆಗಟ್ಟಲು ರೇಡಿಯೊ ತರಂಗಾಂತರ ಗುರುತಿನ ಟ್ಯಾಗ್‌ ಅನ್ನು (ಆರ್‌ಎಫ್‌ಐಡಿ)ವಾಹನಗಳಿಗೆ ಅಳವಡಿಸುವ ಚಿಂತನೆ ಇದೆ ಎಂದು ಜಿಎಸ್‌ಟಿಎನ್‌ ಸಮಿತಿ ಮುಖ್ಯಸ್ಥ, ಬಿಹಾರದ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್ ಮೋದಿ ಹೇಳಿದರು.

ಇಲ್ಲಿ ಶನಿವಾರ ರಾಜ್ಯದ ಹಿರಿಯ ತೆರಿಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜಿಎಸ್‌ಟಿ ಜಾರಿಗೆ ಬಂದು ಎರಡು ವರ್ಷಗಳಾಗಿದ್ದು, ಇದನ್ನು ಇನ್ನಷ್ಟು ಸರಳಗೊಳಿಸುವುದೇ ಕೇಂದ್ರದ ಉದ್ದೇಶ.ಜುಲೈ 1ರಿಂದಲೇ ಹೊಸ ಮಾದರಿಯ ರಿಟರ್ನ್‌ ಸಲ್ಲಿಕೆ ಆರಂಭವಾಗಲಿದೆ’
ಎಂದರು.

ತೆರಿಗೆ ವಂಚನೆ ತಡೆಗೆ ಕ್ರಮ: ‘ತೆರಿಗೆ ವಂಚನೆ ತಡೆಯುವಲ್ಲಿ ಇ–ವೇ ಬಿಲ್‌ ಬಹಳ ಮಹತ್ವದ ಪಾತ್ರ ವಹಿಸಿದೆ. ಇ-ಇನ್‌ವಾಯ್ಸ್‌ ವ್ಯವಸ್ಥೆ ಜಾರಿಗೆ ತಂದರೆ ತೆರಿಗೆ ಪಾವತಿ ಕ್ರಮ ಇನ್ನಷ್ಟು ನಿಖರವಾಗಿಬಿಡುತ್ತದೆ. ಇ–ಇನ್‌ವಾಯ್ಸ್‌ ಮಾಡಿದರೆ ರಿಟರ್ನ್‌ ಸಹ ಸಲ್ಲಿಸುವ ಅಗತ್ಯವಿರುವುದಿಲ್ಲ’ ಎಂದು ಮೋದಿ ಹೇಳಿದರು.

‘ಇನ್ನು ಮುಂದೆ ವಾಹನಗಳಿಗೆ ಆರ್‌ಎಫ್ಐ‌ಡಿ ಅಳವಡಿಸುವ ಚಿಂತನೆ ಇದೆ. ಈ ಟ್ಯಾಗ್ ಅಳವಡಿಸಿಕೊಂಡ ವಾಹನಗಳುದೇಶದಲ್ಲಿರುವ 450ರಷ್ಟು ಟೋಲ್‌ ಫ್ಲಾಜಾಗಳ ಮೂಲಕ ಹಾದುಹೋಗುವಾಗ ಅವುಗಳ ನಿಖರ ಸರಕು ಸಾಗಣೆ ಮಾಹಿತಿ ಲಭಿಸುತ್ತದೆ’ ಎಂದರು.

ಎಸ್‌ಎಂಎಸ್‌: ‘ಯಾವುದೇ ವ್ಯವಹಾರ ನಡೆಸದೇ ಇರುವವರು ಎಸ್‌ಎಂಎಸ್‌ ಮೂಲಕವೇ ‘ನಿಲ್‌ ರಿಟರ್ನ್‌’ ಸಲ್ಲಿಸ
ಬಹುದು. ನೋಂದಾಯಿತ ಮೊಬೈಲ್‌ ನಂಬರ್‌ ಮೂಲಕ ಎಸ್‌ಎಂಎಸ್‌ ಕಳುಹಿಸಿ ರಿಟರ್ನ್ಸ್‌ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT