ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್‌ ಜಿಎಸ್‌ಟಿ ಮರುಪಾವತಿಗೆ ಅವಕಾಶ

ಫ್ಲ್ಯಾಟ್‌ ಖರೀದಿ ರದ್ದುಪಡಿಸಿದ ಗ್ರಾಹಕರಿಗೆ ಲಾಭ
Last Updated 8 ಮೇ 2019, 20:07 IST
ಅಕ್ಷರ ಗಾತ್ರ

ನವದೆಹಲಿ: ಖರೀದಿದಾರರು 2018–19ರ ಹಣಕಾಸು ವರ್ಷದಲ್ಲಿ ಬುಕಿಂಗ್‌ ಮಾಡಿದ ಫ್ಲ್ಯಾಟ್‌ ರದ್ದುಪಡಿಸಿದರೆ, ರಿಲಯ್‌ ಎಸ್ಟೇಟ್ ಸಂಸ್ಥೆಗಳು ಅವರಿಂದ ವಸೂಲಿ ಮಾಡಿದ್ದ ಜಿಎಸ್‌ಟಿ ಮರುಪಾವತಿಸಬೇಕು ಎಂದು ತೆರಿಗೆ ಇಲಾಖೆ ತಿಳಿಸಿದೆ.

ಒಂದೊಮ್ಮೆ ನಿರ್ಮಾಣಗಾರರು ಮನೆ ಖರೀದಿದಾರರಿಂದ 2019ರ ಏಪ್ರಿಲ್‌ 1ರಿಂದ ಶೇ 12ರಷ್ಟು ಜಿಎಸ್‌ಟಿ ಸಂಗ್ರಹಿಸಿ ಆನಂತರ ಹೊಸ ಜಿಎಸ್‌ಟಿ ದರ ಶೇ 5ನ್ನು ಆಯ್ಕೆ ಮಾಡಿಕೊಂಡರೆ, ಅಂತಹ ಸಂದರ್ಭದಲ್ಲಿ ಹೆಚ್ಚುವರಿ ತೆರಿಗೆ ದರವಾದ ಶೇ 7ನ್ನುಗ್ರಾಹರಿಗೆ ಮರುಪಾವತಿಸಬೇಕು ಎಂದು ತಿಳಿಸಿದೆ.

ರಿಯಲ್‌ ಎಸ್ಟೇಟ್‌ ವಲಯಕ್ಕೆ ಹೊಸ ಜಿಎಸ್‌ಟಿ ದರ ಆಯ್ಕೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಈ ಕುರಿತು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಸ್ಪಷ್ಟನೆ ನೀಡಿದೆ.

ಶುಕ್ರವಾರದ ಗಡುವು: ಜಿಎಸ್‌ಟಿದರಆಯ್ಕೆಯ ಅವಕಾಶವನ್ನು ತಿಳಿಸಲು ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಗೆ ಶುಕ್ರವಾರದವರೆಗೆ (ಮೇ 10) ಕಾಲಾವಕಾಶ ನೀಡಲಾಗಿದೆ.

ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ನೊಂದಿಗೆ (ಐಟಿಸಿ) ಹಳೆಯಜಿಎಸ್‌ಟಿದರಗಳಲ್ಲಿಯೇ ಮುಂದುವರಿಯಲು ಬಯಸುವ ಸಂಸ್ಥೆಗಳು ಆಯಾ ಸ್ಥಳೀಯ ಅಧಿಕಾರಿಗಳಿಗೆ ತಮ್ಮ ನಿರ್ಧಾರವನ್ನು ತಿಳಿಸಬೇಕು. ಇಲ್ಲವಾದರೆ, ಸ್ವಯಂಚಾಲಿತವಾಗಿಹೊಸತೆರಿಗೆ ದರಗಳು ಅನ್ವಯವಾಗಲಿವೆ.

ವಸತಿ ಯೋಜನೆಗಳಿಗೆ ಐಟಿಸಿಯೊಂದಿಗೆ ಹಳೆಯ ತೆರಿಗೆ ದರ ಶೇ 12 ಮತ್ತು ಅಗ್ಗದ ಮನೆಗಳಿಗೆ ಶೇ 8ರಷ್ಟಿದೆ. ಹೊಸ ತೆರಿಗೆ ದರವು ಕ್ರಮವಾಗಿ ಐಟಿಸಿ ಇಲ್ಲದ ಶೇ 5 ಮತ್ತು ಶೇ 1ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT