ಭಾನುವಾರ, ಸೆಪ್ಟೆಂಬರ್ 22, 2019
22 °C
ಆಗಸ್ಟ್‌ನಿಂದ ಜಾರಿಗೆ ತರಲು ಕೇಂದ್ರದ ಸಿದ್ಧತೆ

ಸರಳಗೊಳ್ಳಲಿದೆ ಜಿಎಸ್‌ಟಿ ಮರುಪಾವತಿ

Published:
Updated:

ನವದೆಹಲಿ: ಸರಳೀ ಕೃತ ಜಿಎಸ್‌ಟಿ ಮರುಪಾವತಿ ವ್ಯವಸ್ಥೆಯು ಆಗಸ್ಟ್‌ನಿಂದ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ, ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳು ಜಿಎಸ್‌ಟಿ ಮರುಪಾವತಿ ಪ್ರಕ್ರಿಯೆಗೆ ಪ್ರತ್ಯೇಕವಾಗಿ ಅನುಮೋದನೆ ನೀಡುತ್ತಿದ್ದಾರೆ.

ಮರುಪಾವತಿಗೆ ಅರ್ಜಿ ಸಲ್ಲಿಸಿದ ಬಳಿಕ ಕೇಂದ್ರದಿಂದ ಶೇ 50ರಷ್ಟು ಮೊತ್ತ ಪಾವತಿಯಾಗುತ್ತಿದೆ. ಇನ್ನುಳಿದ ಮೊತ್ತಕ್ಕೆ ರಾಜ್ಯ ತೆರಿಗೆ ಅಧಿಕಾರಿಗಳು ಅನುಮೋದನೆ ನೀಡುತ್ತಿದ್ದಾರೆ. ಇದರಿಂದ ಪೂರ್ತಿ ಮೊತ್ತ ತೆರಿಗೆದಾರರ ಕೈಸೇರುವಲ್ಲಿ ವಿಳಂಬವಾಗುತ್ತಿದೆ.

ಆಗಸ್ಟ್‌ನಿಂದ ಯಾವುದಾದರೂ ಒಂದು ತೆರಿಗೆ ಇಲಾಖೆಯ ಅಧಿಕಾರಿಗಳು ಮರುಪಾವತಿಗೆ ಅನುಮತಿ ನೀಡಲಿದ್ದಾರೆ. ಈ ವ್ಯವಸ್ಥೆ ಜಾರಿಗೆ ತರಲು ರೆವಿನ್ಯೂ ಇಲಾಖೆ ಕಾರ್ಯಗತವಾಗಿದೆ ಎಂದು ಹೇಳಿದ್ದಾರೆ.

ಹೊಸ ವ್ಯವಸ್ಥೆಯಲ್ಲಿ ಮರುಪಾವತಿಗೆ ಅರ್ಜಿ ಸಲ್ಲಿಸದ ಬಳಿಕ ಕೇಂದ್ರ ಅಥವಾ ರಾಜ್ಯದ ತೆರಿಗೆ ಅಧಿಕಾರಿಗಳು ಅದನ್ನು ಪರಿಶೀಲನೆ ನಡೆಸಿ ಪೂರ್ತಿ ಮೊತ್ತವನ್ನು ನೀಡಲಿದ್ದಾರೆ. ಆ ಬಳಿಕ ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳು ಆಂತರಿಕ ಖಾತೆ ಹೊಂದಾಣಿಕೆ ಮೂಲಕ ಮರುಪಾವತಿಯನ್ನು ಇತ್ಯರ್ಥಪಡಿಸಿಕೊಳ್ಳಲಿದ್ದಾರೆ.

Post Comments (+)