ರಫ್ತುದಾರರಿಗೆ ₹ 82,775 ಕೋಟಿ ಜಿಎಸ್‌ಟಿ ಮರುಪಾವತಿ

7

ರಫ್ತುದಾರರಿಗೆ ₹ 82,775 ಕೋಟಿ ಜಿಎಸ್‌ಟಿ ಮರುಪಾವತಿ

Published:
Updated:

ನವದೆಹಲಿ: ರಫ್ತುದಾರರಿಗೆ ಇದುವರೆಗೆ ₹ 82,775 ಕೋಟಿಗಳಷ್ಟು ಜಿಎಸ್‌ಟಿ ಮರುಪಾವತಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ತೆರಿಗೆ ಪ್ರಾಧಿಕಾರಗಳಿಗೆ ರಫ್ತುದಾರರು ಸಲ್ಲಿಸಿದ್ದ ಜಿಎಸ್‌ಟಿ ಮರುಪಾವತಿಯ ಕೋರಿಕೆಗಳಿಗೆ ಸಂಬಂಧಿಸಿದಂತೆ ಈ ಮೊತ್ತವನ್ನು ಮರಳಿಸಿರುವುದರಿಂದ ಶೇ 94ರಷ್ಟು ಬೇಡಿಕೆ ಈಡೇರಿಸಿದಂತಾಗಿದೆ. ₹ 5,400 ಕೋಟಿ ಜಿಎಸ್‌ಟಿ ಮರುಪಾವತಿ ಇನ್ನೂ ಬಾಕಿ ಉಳಿದಿದೆ. ಅದನ್ನೂ ತ್ವರಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು ಅಕ್ಟೋಬರ್‌ ಅಂತ್ಯದವರೆಗೆ ಒಟ್ಟು ₹ 82,775 ಕೋಟಿ ಮೊತ್ತದ ಜಿಎಸ್‌ಟಿ ಮರುಪಾವತಿಸಿದೆ. ಇದರಲ್ಲಿ ಐಜಿಎಸ್‌ಟಿ ಮೊತ್ತ ₹ 42,935 ಕೋಟಿಗಳಷ್ಟಿದೆ. ಉಳಿದ ಕೋರಿಕೆಗಳನ್ನೂ ತ್ವರಿತವಾಗಿ ಬಗೆಹರಿಸಲಾಗುವುದು ಎಂದು ಹಣಕಾಸು ಇಲಾಖೆಯು ಭರವಸೆ ನೀಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !