ಜಿಎಸ್‌ಟಿ ಹೊಸ ನೋಂದಣಿಎಚ್ಚರಿಕೆ ವಹಿಸಿ: ಸಿಬಿಐಸಿ

ಮಂಗಳವಾರ, ಏಪ್ರಿಲ್ 23, 2019
33 °C

ಜಿಎಸ್‌ಟಿ ಹೊಸ ನೋಂದಣಿಎಚ್ಚರಿಕೆ ವಹಿಸಿ: ಸಿಬಿಐಸಿ

Published:
Updated:

ನವದೆಹಲಿ: ಹೊಸದಾಗಿ ಜಿಎಸ್‌ಟಿ ನೋಂದಣಿ ಮಾಡುವಾಗ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ ಎಚ್ಚರಿಕೆ ನೀಡಿದೆ.

ತೆರಿಗೆ ಪಾವತಿದೇ ಇರುವ ಕಾರಣಕ್ಕಾಗಿ ಭಾರಿ ಸಂಖ್ಯೆಯಲ್ಲಿ ನೋಂದಣಿ ರದ್ದುಪಡಿಸಲಾಗಿದೆ. ಇವರಲ್ಲಿ ಬಹಳಷ್ಟು ಉದ್ಯಮಗಳು ನೋಂದಣಿ ರದ್ದಾಗಿದ್ದರೂ ವಹಿವಾಟು ಮುಂದುವರಿಸಿವೆ. ಆದರೆ, ರದ್ದಾಗಿರುವ ನೋಂದಣಿಗಳ ನವೀಕರಣಕ್ಕೂ ಅರ್ಜಿ ಸಲ್ಲಿಸುವ ಬದಲಾಗಿ ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.

ಹೊಸ ಅರ್ಜಿಯಲ್ಲಿ ಪ್ರವರ್ತಕ, ಒಕ್ಕೂಟ ಅಥವಾ ಧರ್ಮದರ್ಶಿಗಳ ಮಂಡಳಿಯ ನಿರ್ದೇಶಕ ಅಥವಾ ಸದಸ್ಯರುಗಳ ಮಾಹಿತಿಗಳನ್ನು ಪರಿಶೀಲನೆ ನಡೆಸುವಂತೆ ಹಾಗೂ ಆ ಮಾಹಿತಿಗಳನ್ನು ಈಗಾಗಲೇ ರದ್ದಾಗಿರುವ ನೋಂದಣಿಗಳೊಂದಿಗೆ ಹೋಲಿಕೆ ಮಾಡಿ ನೋಡುವಂತೆಯೂ ಸೂಚನೆ ನೀಡಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !