ಮಂಗಳವಾರ, ಆಗಸ್ಟ್ 20, 2019
26 °C

ಜಿಎಸ್‌ಟಿಆರ್‌–3ಬಿ ಸಲ್ಲಿಕೆಅವಧಿ 3 ದಿನ ವಿಸ್ತರಣೆ

Published:
Updated:

ನವದೆಹಲಿ: ಸರಕು ಮತ್ತು ಸೇವೆಗಳ ಮಾರಾಟದ ಮಾರ್ಚ್‌ ತಿಂಗಳ ಅಂತಿಮ ರಿಟರ್ನ್‌ (ಜಿಎಸ್‌ಟಿಆರ್‌–3ಬಿ) ಸಲ್ಲಿಸಲು ನೀಡಿದ್ದ ಗಡುವನ್ನು ಸರ್ಕಾರ ಇದೇ 23ರವರೆಗೂ ವಿಸ್ತರಿಸಿದೆ.

ಜಿಎಸ್‌ಟಿಆರ್‌–3ಬಿ ಸಲ್ಲಿಕೆಗೆ ಶನಿವಾರ ಅಂತಿಮ ದಿನವಾಗಿತ್ತು.

‘ಜಿಎಸ್‌ಟಿಎನ್‌ನಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ರಿಟರ್ನ್ಸ್‌ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗುತ್ತಿದೆ’ ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಪಾಲುದಾರ ರಜತ್‌ ಮೋಹನ್‌ ತಿಳಿಸಿದ್ದಾರೆ.

‘ತೆರಿಗೆ ಪಾವತಿದಾರರು ಅಂತಿಮ ದಿನಕ್ಕಾಗಿ ಕಾಯದೆ, ಮುಂಚಿತವಾಗಿಯೇ ರಿಟರ್ನ್ಸ್‌ ಸಲ್ಲಿಸುವುದನ್ನು ರೂಢಿಸಿಕೊಳ್ಳಬೇಕು. ಆಗ ಜಾಲತಾಣದ ಮೇಲಿನ ಹೊರೆ ಕಡಿಮೆಯಾಗುತ್ತದೆ’ ಎಂದೂ ಸಲಹೆ ನೀಡಿದ್ದಾರೆ.

Post Comments (+)