ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ವೇ ಬಿಲ್‌ಗೆ ರಿಟರ್ನ್ಸ್ ಕಡ್ಡಾಯ

ಏಪ್ರಿಲ್‌ನಿಂದ ಫಾಸ್ಟ್ಯಾಗ್‌ಗೆ ಇ–ವೇ ಬಿಲ್‌ ಜೋಡಣೆ
Last Updated 20 ಜನವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಆರು ತಿಂಗಳವರೆಗೆ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸದೇ ಇದ್ದರೆ ಅಂತಹ ವಹಿವಾಟುದಾರರಿಗೆ ಇ–ವೇ ಬಿಲ್‌ ಸೃಷ್ಟಿಸಲು ಅವಕಾಶ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರು ತಿಂಗಳವರೆಗೆ ರಿಟರ್ನ್ಸ್‌ ಸಲ್ಲಿಸದೇ ಇದ್ದರೆ ಇ–ವೇ ಬಿಲ್‌ ಸೃಷ್ಟಿಯಾಗದೇ ಇರುವಂತಹ ವ್ಯವಸ್ಥೆಯನ್ನುಸರಕು ಮತ್ತು ಸೇವಾ ತೆರಿಗೆ ನೆಟ್‌ವರ್ಕ್‌ (ಜಿಎಸ್‌ಟಿಎನ್‌) ಅಭಿವೃದ್ಧಿಪಡಿಸುತ್ತಿದೆ. ಈ ಬಗ್ಗೆ ಶೀಘ್ರವೇ ಅಧಿಸೂಚನೆ ಹೊರಬೀಳಲಿದೆ.

ಜಿಎಸ್‌ಟಿ ನೋಂದಣಿ ಮತ್ತು ವರಮಾನದಲ್ಲಿ ಹೆಚ್ಚಳಕ್ಕೆ ತೆರಿಗೆ ತಪ್ಪಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎನ್ನುವುದನ್ನು ತೆರಿಗೆ ಅಧಿಕಾರಿಗಳು ಮನಗಂಡಿದ್ದಾರೆ. ಹೀಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಫಾಸ್ಟ್ಯಾಗ್‌ಗೆ ಇ–ವೇ ಬಿಲ್‌: ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಕೇಂದ್ರಗಳಲ್ಲಿನಫಾಸ್ಟ್ಯಾಗ್‌ ಜತೆ ಇ–ವೇ ಬಿಲ್‌ ಜೋಡಿಸುವ ಪ್ರಕ್ರಿಯೆ ಏಪ್ರಿಲ್‌ನಿಂದ ಜಾರಿಗೆ ಬರಲಿದೆ ಎಂದು ರೆವಿನ್ಯೂ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇ–ವೇಬಿಲ್‌ಗೆಫಾಸ್ಟ್ಯಾಗ್‌ ತಳಕು ಹಾಕುವುದರಿಂದ ರೆವಿನ್ಯೂ ಅಧಿಕಾರಿಗಳು ವಾಹನಗಳ ಮೇಲೆ ನಿಗಾ ಇರಿಸಬಹುದು.ಸರಕು ಸಾಗಣೆ ವಾಹನಗಳ ತ್ವರಿತ ಸಂಚಾರಕ್ಕೆ ಅನುವು ಮಾಡಿಕೊಡಲು ಮತ್ತು ಜಿಎಸ್‌ಟಿ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕಲೂ ಇದರಿಂದ ಅನುಕೂಲವಾಗಲಿದೆ.ಸರಕು ಪೂರೈಕೆದಾರರೂ ಎಸ್‌ಎಂಎಸ್‌ ಮೂಲಕ ವಾಹನದ ಬಗ್ಗೆ ಮಾಹಿತಿಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT