ಮಂಗಳವಾರ, ಫೆಬ್ರವರಿ 18, 2020
15 °C

ಹೊಸ ರಿಟರ್ನ್ಸ್‌: ಇನ್ನಷ್ಟು ಸರಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜಿಎಸ್‌ಟಿಯ ಹೊಸ ರಿಟರ್ನ್ಸ್‌ ಸರಳವಾಗಿದೆ. ರಾಜ್ಯದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಕೇಂದ್ರೀಯ ತೆರಿಗೆ ಇಲಾಖೆಯ ಬೆಂಗಳೂರು ವಲಯದ ಪ್ರಧಾನ ಮುಖ್ಯ ಆಯುಕ್ತ ನಾಗೇಂದ್ರ ಕುಮಾರ್‌ ಡಿ.ಪಿ ತಿಳಿಸಿದರು.

‘ಹೊಸ ರಿಟರ್ನ್ಸ್‌ ಕುರಿತು ದೇಶದಾದ್ಯಂತ ಡಿಸೆಂಬರ್‌ 7ನ್ನು ಅಭಿಪ್ರಾಯ ಸಂಗ್ರಹ ದಿನವಾಗಿ ಆಚರಿಸಲಾಗುತ್ತಿದೆ. ಶನಿವಾರ ಒಂದೇ ದಿನ ರಾಜ್ಯದಲ್ಲಿ 2 ಸಾವಿರ ರಿಟರ್ನ್ಸ್‌ ಸಲ್ಲಿಕೆಯಾಗಿದೆ. ಇವರಲ್ಲಿ ಶೇ 70ರಷ್ಟು ಮಂದಿ ಹೊಸ ರಿಟರ್ನ್ಸ್‌ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ’ ಎಂದು ಹೇಳಿದ್ದಾರೆ. ಸ್ಥಳೀಯವಾಗಿ ಇಲಾಖೆಯ ಕಚೇರಿಗಳಲ್ಲಿ ತರಬೇತಿ ನೀಡುವ, ಸಮಸ್ಯೆ ಬಗೆಹರಿಸುವ ಕೆಲಸಗಳು ನಡೆಯುತ್ತಿವೆ’ ಎಂದು ಅವರು ಹೇಳಿದರು.

2020ರ ಏಪ್ರಿಲ್‌ 1 ರಿಂದ ಪರಿಷ್ಕೃತ ರಿಟರ್ನ್ಸ್‌ ವ್ಯವಸ್ಥೆಯು ಜಾರಿಗೆ ಬರಲಿದೆ. ಹೀಗಾಗಿ ಪ್ರಾಯೋಗಿಕವಾಗಿ ಈಗಲೇ ಜಾರಿಗೆ ತರಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು