ಬುಧವಾರ, ಡಿಸೆಂಬರ್ 2, 2020
24 °C

ಜಿಎಸ್‌ಟಿ ಜಾಲತಾಣ ಮೇಲ್ದರ್ಜೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜಿಎಸ್‌ಟಿ ಜಾಲತಾಣವನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಏಕಕಾಲಕ್ಕೆ 3 ಲಕ್ಷ ತೆರಿಗೆದಾರರು ಲಾಗಿನ್‌ ಆಗಬಹುದಾಗಿದೆ ಎಂದು ಜಿಎಸ್‌ಟಿ ಜಾಲತಾಣವು ಭಾನುವಾರ ತಿಳಿಸಿದೆ.

ಲಾಕ್‌ಡೌನ್‌ ಸಡಿಲಿಸುತ್ತಿರುವುದರಿಂದ ಪರೋಕ್ಷ ತೆರಿಗೆಗೆ ಸಂಬಂಧಿಸಿದ ಚುಟವಟಿಕೆಗಳಲ್ಲಿ ಗಣನೀಯ ಏರಿಕೆ ಆಗುತ್ತಿದೆ. ಹೀಗಾಗಿ ಜಾಲತಾಣದ ಸಾಮರ್ಥ್ಯವನ್ನು 1.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದೆ.

ಮಾರಾಟಕ್ಕೆ ಸಂಬಂಧಿಸಿದ ‘ಜಿಎಸ್‌ಟಿಆರ್–3ಬಿ’ಯ ಪಿಡಿಎಫ್‌ ನಮೂನೆಯು  ಇದೇ ತಿಂಗಳ 12ರಿಂದ ಜಾಲತಾಣದಲ್ಲಿ ಲಭ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು