ಮುಂಬೈ (ಪಿಟಿಐ): ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯರು ತಾಯ್ನಾಡಿಗೆ ಕಳಿಸುವ ಹಣದ ರವಾನೆ ಮೇಲೆ ಪಶ್ಚಿಮ ಏಷ್ಯಾದ ಸಂಘರ್ಷವು ಪರಿಣಾಮ ಬೀರಬಹುದು ಎಂದು ಕ್ರಿಸಿಲ್ ರೇಟಿಂಗ್ಸ್ ಸಂಸ್ಥೆ ಶುಕ್ರವಾರ ಹೇಳಿದೆ.

ಒಟ್ಟು ರವಾನೆಯಲ್ಲಿ ಮೂರನೇ ಒಂದು ಭಾಗದಷ್ಟು ಕೊಲ್ಲಿ ರಾಷ್ಟ್ರಗಳಿಂದಲೇ ಹಣವು ಬರುತ್ತದೆ.

ಈ ಸಂಘರ್ಷದಿಂದ ದೇಶಕ್ಕೆ ಬರಬೇಕಿರುವ ಹಣದ ರವಾನೆ ಕಡಿಮೆ ಆಗಲಿದ್ದು, ಕುಟುಂಬಗಳ ಆದಾಯದ ಮೇಲೆ ಪರಿಣಾಮ ಬೀರಲಿದೆ. ಇದು ದೇಶದ ಚಾಲ್ತಿ ಖಾತೆ ಕೊರತೆಯ ಮೇಲೂ ಸಹ ಪರಿಣಾಮ ಬೀರಬಹುದು ಎಂದು ಅಂದಾಜಿಸಿದೆ.

2024–25ರಲ್ಲಿ ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯರು ತಾಯ್ನಾಡಿಗೆ ₹12.54 ಲಕ್ಷ ಕೋಟಿ ರವಾನಿಸಿದ್ದರು.

ಸಂಘರ್ಷದಿಂದ ಜಾಗತಿಕ ವ್ಯಾಪಾರಕ್ಕೆ ಅಡ್ಡಿಯಾಗಲಿದ್ದು, ದೇಶದ ರಫ್ತು ಬೆಳವಣಿಗೆಯಲ್ಲಿ ಸ್ವಲ್ಪ ಇಳಿಕೆ ಕಂಡು ಬರುವ ಸಾಧ್ಯತೆ ಇದೆ. ಕಚ್ಚಾ ತೈಲದ ಬೆಲೆಯಲ್ಲಿ ಶೇ 8ರಿಂದ ಶೇ 9ರಷ್ಟು ಹೆಚ್ಚಳದಿಂದಾಗಿ ದೇಶದ ಆಮದು ವೆಚ್ಚ ಏರಿಕೆಯಾಗಬಹುದು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.