ಬೆಳ್ತಂಗಡಿ: ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘವು 17 ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿ 27 ಶಾಖೆಗಳ ಮೂಲಕ 2025-26ರ ಆರ್ಥಿಕ ವರ್ಷದಲ್ಲಿ ₹ 1,953.29 ಕೋಟಿ ವ್ಯವಹಾರ ನಡೆಸಿ ₹ 5.85 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಭಗೀರಥ ಜಿ.ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಪ್ರಸ್ತುತ 34,886 ಸದಸ್ಯರಿದ್ದು, ₹ 326.34 ಕೋಟಿ ಠೇವಣಿ ಸಂಗ್ರಹ ಇದೆ. ₹ 70.11 ಕೋಟಿ ಹೂಡಿಕೆ ಮಾಡಲಾಗಿದ್ದು, ₹ 269.42 ಕೋಟಿ ಸಾಲ ನೀಡಲಾಗಿದೆ ಎಂದರು.

ಶೇ 97.68 ಸಾಲ ವಸೂಲಿ ಮಾಡಲಾಗಿದೆ. ಸಾಲಗಾರ ಸದಸ್ಯರು ಮೃತಪಟ್ಟರೆ ಅಥವಾ ಅವಘಡದಿಂದ ಶಾಶ್ವತ ಅಂಗವಿಕಲರಾದಲ್ಲಿ ಅಂಥ ಸದಸ್ಯರ ಕಷ್ಟಕ್ಕೆ ಸ್ಪಂದಿಸಿ ಶ್ರೀಗುರು ಸಾಲಗಾರರ ಮರಣ ನಿಧಿಯಿಂದ ಒಟ್ಟು 119 ಮಂದಿಗೆ ₹ 88,18,140 ಮೊತ್ತ ನೀಡಿ ಋಣಮುಕ್ತಗೊಳಿಸಲಾಗಿದೆ ಎಂದು ತಿಳಿಸಿದರು.

ಸಂಘದಲ್ಲಿ ಗ್ರಾಹಕರಿಗೆ ಶೀಘ್ರದಲ್ಲಿ ಚಿನ್ನಾಭರಣ ಸಾಲ, ಇ–ಸ್ಟ್ಯಾಂಪಿಂಗ್ ಸೌಲಭ್ಯ, ಆಕರ್ಷಕ ಬಡ್ಡಿ ದರದಲ್ಲಿ ಠೇವಣಿ ಸ್ವೀಕಾರ, ಪಿಂಚಣಿ, ವಿದ್ಯಾಭ್ಯಾಸ ಹಾಗೂ ಹೆಣ್ಣು ಮಕ್ಕಳ ಮದುವೆಗೆ ಸಹಕಾರ ನೀಡುವ ಠೇವಣಿ ಯೋಜನೆ, ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರು ಹಾಗೂ ಸಂಘ ಸಂಸ್ಥೆಗಳಿಗೆ ಶೇ 0.5 ಹೆಚ್ಚುವರಿ ಬಡ್ಡಿ, ದೇಶದಾದ್ಯಂತ ಪಾವತಿಯಾಗುವ ಮಲ್ಟಿಸಿಟಿ ಚೆಕ್ ಮತ್ತು ಡಿ.ಡಿ ಸೌಲಭ್ಯ, ವೆಸ್ಟರ್ನ್ ಯೂನಿಯನ್, ಎಕ್ಸ್ಪ್ರೆಸ್ ಮನಿ, ರಿಯಾ ಮನಿ ಟ್ರಾನ್ಸ್ಫರ್ ಮೂಲಕ ವಿದೇಶಿ ಹಣ ವರ್ಗಾವಣೆ ಸೌಲಭ್ಯ, ಆರ್.ಟಿ.ಜಿ.ಎಸ್ ಹಾಗೂ ನೆಫ್ಟ್ ಸೌಲಭ್ಯ, ಸೇಫ್ ಲಾಕರ್ ಸೌಲಭ್ಯ, ಇಪ್ಕೋ ಟೋಕಿಯೊ ವಿಮಾ ಸೌಲಭ್ಯ, ಪಹಣಿ ಪತ್ರ ಸೌಲಭ್ಯಗಳಿವೆ. ಇನ್ನು ಮುಂದಿನ ದಿನಗಳಲ್ಲಿ ಕ್ಯೂ ಆರ್ ಕೋಡ್, ನ್ಯಾಚ್, ಇ - ಕಲೆಕ್ಷನ್ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ಸಂಘವು ಬ್ಯಾಂಕಿಂಗ್ ಚಟುವಟಿಕೆ ಜತೆಗೆ 3 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ಖರ್ಚುವೆಚ್ಚ ಭರಿಸಿ ಅವರಿಗೆ ಉತ್ತಮ ಉದ್ಯೋಗ ಸಿಗುವಂತೆ ಮಾಡಿದೆ. ಒಬ್ಬರು ವೈದ್ಯಕೀಯ ವಿದ್ಯಾರ್ಥಿಯ ಆಂಶಿಕ ವೆಚ್ಚವನ್ನು ಭರಿಸಲಾಗಿದೆ. ಆಯ್ದ ಪದವಿ ವ್ಯಾಸಂಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವು, ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಸ್ಥಳೀಯ ಸಂಘ ಸಂಸ್ಥೆಗಳ ಜತೆ ಆರೋಗ್ಯ ಶಿಬಿರ, ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಶ್ರೀ ಗುರುಕೃಪಾ ಎಜುಕೇಶನ್ ಟ್ರಸ್ಟ್ ಬಲ್ಯೊಟ್ಟು ಇಲ್ಲಿಗೆ ₹ 2 ಲಕ್ಷ ವಿದ್ಯಾನಿಧಿ ನಿರಂತರವಾಗಿ ನೀಡಲಾಗುವುದು. ಈ ಆರ್ಥಿಕ ವರ್ಷದಲ್ಲಿ ಅರ್ಹ ಫಲಾನುಭವಿಯನ್ನು ಗುರುತಿಸಿ ಮನೆ ನಿರ್ಮಿಸಿಕೊಡುವ ಉದ್ದೇಶ ಇದೆ ಎಂದರು.

17 ಶಾಖೆಗಳಲ್ಲಿ 109 ಸಿಬ್ಬಂದಿ, 62 ಮಂದಿ ನಿತ್ಯನಿಧಿ ಸಂಗ್ರಾಹಕರು ಸೇವೆ ಸಲ್ಲಿಸುತ್ತಿದ್ದಾರೆ. ₹ 5.28 ಕೋಟಿ ವೆಚ್ಚದಲ್ಲಿ ಸಂಘವು ಸ್ವಂತ ಕೇಂದ್ರ ಕಚೇರಿಯನ್ನು ಹೊಂದಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಹಳೆಯಂಗಡಿ, ಬೆಳುವಾಯಿ, ಕಬಕ, ಮೂಡುಬಿದಿರೆ, ಬಜಗೋಳಿ ಶಾಖೆಯ ಕಟ್ಟಡ ಖರೀದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗುರುಪುರ - ಕೈಕಂಬ, ಬೆಳ್ಳಾರೆ ಮತ್ತು ಕುತ್ತಾರ್ ಪದವಿನಲ್ಲಿ ಹೊಸ ಶಾಖೆಗಳು ಪ್ರಾರಂಭವಾಗಲಿವೆ ಎಂದು ಅವರು ತಿಳಿಸಿದರು.

ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ನಿರ್ದೇಶಕರಾದ ಸಂಜೀವ ಪೂಜಾರಿ, ಚಂದ್ರಶೇಖರ್, ಗಂಗಾಧರ ಮಿತ್ತಮಾರ್, ಧರಣೇಂದ್ರ ಕುಮಾರ್, ಚಿದಾನಂದ ಪೂಜಾರಿ ಎಲ್ದಕ್ಕ, ಮುಖ್ಯಾಧಿಕಾರಿ ಮೋನಪ್ಪ ಪೂಜಾರಿ, ಸಿಇಒ ಅಶ್ವತ್ಥ್ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-29-410551715

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.