ಎಚ್‌ಎಎಲ್‌ ನಿವ್ವಳ ಲಾಭ ₹ 455 ಕೋಟಿ

7

ಎಚ್‌ಎಎಲ್‌ ನಿವ್ವಳ ಲಾಭ ₹ 455 ಕೋಟಿ

Published:
Updated:

ಬೆಂಗಳೂರು: ಸರ್ಕಾರಿ ಸ್ವಾಮ್ಯದ ರಕ್ಷಣಾ ಕೇಂದ್ರೋದ್ಯಮವಾಗಿರುವ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್) ಮೂರನೆ ತ್ರೈಮಾಸಿಕದಲ್ಲಿ ₹ 455 ಕೋಟಿ ನಿವ್ವಳ ಲಾಭ ಗಳಿಸಿದೆ.

ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿನ ₹ 549 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಇದು ಶೇ 17ರಷ್ಟು ಕಡಿಮೆಯಾಗಿದೆ. ಸಂಸ್ಥೆಯ ವರಮಾನವು ₹ 4,625 ಕೋಟಿಗಳಷ್ಟಾಗಿ ಶೇ 8ರಷ್ಟು ಏರಿಕೆ ಕಂಡಿದೆ.

ಈ ತ್ರೈಮಾಸಿಕ ಅವಧಿಯಲ್ಲಿ ವೆಚ್ಚ ಹೆಚ್ಚಳದ ಕಾರಣಕ್ಕೆ ನಿವ್ವಳ ಲಾಭದ ಪ್ರಮಾಣ ಕಡಿಮೆಯಾಗಿದೆ.

ವರ್ಷದ ಹಿಂದಿನ ₹ 3,618 ಕೋಟಿ ವೆಚ್ಚಕ್ಕೆ ಹೋಲಿಸಿದರೆ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 3,799 ಕೋಟಿ ವೆಚ್ಚವಾಗಿದೆ ಎಂದು ಸಂಸ್ಥೆಯು ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !