ಎಚ್‌ಎಎಲ್‌ ದಾಖಲೆ ವಹಿವಾಟು

7

ಎಚ್‌ಎಎಲ್‌ ದಾಖಲೆ ವಹಿವಾಟು

Published:
Updated:

ಬೆಂಗಳೂರು: ಹಿಂದೂಸ್ತಾನ್ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಕಂಪನಿಯು 2017–18ನೇ ಹಣಕಾಸು ವರ್ಷದಲ್ಲಿ
₹ 18,288 ಕೋಟಿ ಮೊತ್ತದ ವಹಿವಾಟು ನಡೆಸಿದೆ.

2016–17ನೇ ಹಣಕಾಸು ವರ್ಷದಲ್ಲಿ ₹ 17,603 ಕೋಟಿ ಮೊತ್ತದ ವಹಿವಾಟು ನಡೆಸಿತ್ತು. ಇದಕ್ಕೆ ಹೋಲಿಸಿದರೆ ಶೇ 2.24ರಷ್ಟು ಪ್ರಗತಿ ಸಾಧಿಸಿದೆ.

‘ಸವಾಲುಗಳ ಹೊರತಾಗಿಯೂ ಉತ್ತಮ ಪ್ರಗತಿ ಸಾಧಿಸಲಾಗಿದೆ’ ಎಂದು ಎಚ್‌ಎಎಲ್‌ ಸಿಎಂಡಿ ಆರ್‌. ಮಾಧವನ್‌ ತಿಳಿಸಿದ್ದಾರೆ.

ತೆರಿಗೆ ಪೂರ್ವ ಲಾಭವು ₹ 3,582 ಕೋಟಿಯಿಂದ ₹ 3,322 ಕೋಟಿಗೆ ಇಳಿಕೆಯಾಗಿದೆ.

ಹಣಕಾಸು ವರ್ಷದಲ್ಲಿ ಒಟ್ಟು 40 ಏರ್‌ಕ್ರಾಫ್ಟ್‌ ಮತ್ತು ಹೆಲಿಕಾಪ್ಟರ್‌ಗಳು, 105 ಹೊಸ ಎಂಜಿನ್‌ಗಳನ್ನೂ ತಯಾರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಒಟ್ಟಾರೆ ₹ 1,076 ಕೋಟಿ ಲಾಭಾಂಶ ನೀಡಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ₹1,612 ಕೋಟಿ ವೆಚ್ಚ ಮಾಡಲಾಗಿದೆ. 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !